ಮಡಿಕೇರಿ, ಆ. 20 : ಕೊಡಗು ಜಿಲ್ಲಾ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ವತಿಯಿಂದ ಕೋಟೆ ಆವರಣದಲ್ಲಿ ವಾರಸುದಾರರಿಲ್ಲದೆ ಇರುವ ಮೋಟಾರು ಸೈಕಲ್ಗಳು ಹಾಗೂ ಆಟೋ ರಿಕ್ಷಾಗಳನ್ನು ತೆರವುಗೊಳಿಸುವ ಸಂಬಂಧ ನಗರ ಪೊಲೀಸ್ ಠಾಣಾ ಆವರಣದಲ್ಲಿ ತಾ. 22 ರಂದು ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ತಿಳಿಸಿದ್ದಾರೆ.