ಮಡಿಕೇರಿ, ಆ. 20: ನಗರದ ಶ್ರೀಕಂಚಿಕಾಮಾಕ್ಷಿ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆ.23 ರಂದು ರಾತ್ರಿ 10 ಗಂಟೆಗೆ ವಿಶೇಷ ಪೂಜೆ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.

ಮೊಸರು ಕುಡಿಕೆ-ಛದ್ಮವೇಷ ಸ್ಪರ್ಧೆ: ಪ್ರತೀ ವರ್ಷದಂತೆ ಈ ಬಾರಿಯೂ ದೇವಾಲಯದಲ್ಲಿ ತಾ. 25 ರಂದು ಸಂಜೆ 4 ಗಂಟೆಗೆ ಮೊಸರು ಕುಡಿಕೆ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಛದ್ಮವೇಷÀ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಶ್ರೀ ಕೃಷ್ಣ-ರಾಧೆ ಛದ್ಮವೇಷÀ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಮಕ್ಕಳು ತಮ್ಮ ಹೆಸರುಗಳನ್ನು ಮೊ. ಸಂ. 9901314105 ಅಥವಾ 9449696355ನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.

ದೇವಾಲಯದಲ್ಲಿ ತಾ. 23 ಹಾಗೂ 25 ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವಂತೆ ಆಡಳಿತ ಮಂಡಳಿ ಕೋರಿದೆ.