ಮಡಿಕೇರಿ, ಆ. 19: ಬ್ರಹ್ಮಗಿರಿ ಬೆಟ್ಟದಲ್ಲಿಅಲ್ಲಲ್ಲಿ ಬಿರುಕು ಮೂಡಿರುವ ಕುರಿತು ಜಿಲ್ಲಾಡಳಿತ ತಕ್ಷಣ ಸ್ಪಂದಿಸಿದ್ದು ವಿಶೇಷ ಕಾಳಜಿ ವಹಿಸಿರುವದು “ಶಕ್ತಿ”ಯ ಗಮನಕ್ಕೆ ಬಂದಿದೆ. ಈ ಕುರಿತಾಗಿ ಭಾನುವಾರದ “ಶಕ್ತಿ” ಯಲ್ಲಿ ಸವಿವರ ವರದಿ ಮಾಡಲಾಗಿತ್ತು.ಸದ್ಯದ ಮಟ್ಟಿಗೆ ಪರಿಣಿತರೊಂದಿಗೆ ಚರ್ಚಿಸಿ ತಾತ್ಕಾಲಿಕ ಕ್ರÀಮ ಕೈಗೊಳ್ಳಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅರಣ್ಯ ಉಪ ಸಂರಕ್ಷಣಾ ಧಿಕಾರಿಯವರಿಗೆ ನಿರ್ದೇಶನವಿತ್ತಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ಇಂಗು ಗುಂಡಿಗಳನ್ನು ತೆರೆಯಲಾಗಿತ್ತು. ಈ ಇಂಗು ಗುಂಡಿಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಅವಶ್ಯಕತೆಯಿದ್ದೆಡೆ ಬೆಟ್ಟದ ಮೇಲೆ ಭೂಕುಸಿತ ತಡೆಯಲು ಮರಳು ಚೀಲಗಳನ್ನು ಬಳಸು ವಂತೆಯೂ, ಬೇಕಾದೆಡೆ ಸಿಮೆಂಟ್ ಬಳಸಿ ಬಿರುಕುಗಳನ್ನು ಮುಚ್ಚು ವಂತೆಯೂ ಜಿಲ್ಲಾಧಿಕಾರಿಯವರು ನಿರ್ದೇಶಿಸಿದ್ದಾರೆ. ಈಗಾಗಲೇ ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸದ್ಯದಲ್ಲಿಯೇ ಈ ಕುರಿತಾಗಿ ವಿವರ ವರದಿ ಸಲ್ಲ್ಲಿಸಲಿದ್ದಾರೆ. ಆ ಸಂದರ್ಭ ಶಾಶ್ವತವಾದ ಪರಿಹಾರ ಮಾರ್ಗೋ ಪಾಯವನ್ನು ಕಂಡುಹಿಡಿದು ಕಾರ್ಯ ನಿರ್ವಹಿಸÀಲಿರುವದಾಗಿ ಜಿಲ್ಲ್ಲಾಧಿಕಾರಿ ಯವರು “ಶಕ್ತಿ”ಗೆ ಮಾಹಿತಿಯಿತ್ತಿದ್ದಾರೆ.
ಈ ಸಂಬಂಧ ಮಡಿಕೇರಿ ಅರಣ್ಯ ಉಪಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಅವರು “ಶಕ್ತಿ” ಯೊಂದಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬ್ರಹ್ಮಗಿರಿಯಲ್ಲಿ
(ಮೊದಲ ಪುಟದಿಂದ) ಕೆಲಸ ನಿರ್ವಹಿಸಲು ಜಿಲ್ಲಾಧಿಕಾರಿಯವರುತಮಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳೊಂದಿಗೂ ಮಾತನಾಡಿ ತಾವು ಸೂಕ್ತ ಕಾರ್ಯಯೋಜನೆ ಕೈಗೊಳ್ಳುವದಾಗಿ ಅವರು ನುಡಿದಿದ್ದಾರೆ. ಬ್ರಹ್ಮಗಿರಿಯಲ್ಲಿ ಕೆಲಸ ನಿರ್ವಹಿಸಲು ಇಲಾಖೆ ಸಿದ್ಧವಿರುವದಾಗಿ ತಿಳಿಸಿದ್ದಾರೆ.
ಈ ನಡುವೆ ಭಾಗಮಂಡಲ ನಾಗರಿಕ ಸಮಿತಿ ಪ್ರÀಮುಖರಾದ ಕೆ.ಜೆ. ಭರತ್ ಅವರು “ಶಕ್ತಿ” ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ರಹ್ಮಗಿರಿ ಬೆಟ್ಟದಲ್ಲಿ ಮೂಡಿರುವ ಬಿರುಕು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ. ಅಲ್ಲಿ ಅರ್ಚಕರ ಮನೆಗಳಿಗೂ ಅಪಾಯ ಸಂಭವವಿದ್ದು ಮುಂದಿನ ವರ್ಷಗಳಲ್ಲಿ ಪವಿತ್ರ ಕ್ಷೇತ್ರವಾದ ತಲಕಾವೇರಿಯಲ್ಲಿ ಸಮಸ್ಯೆಗೆ ಕಾರಣವಾಗಲ್ಲದು. ಈ ಕುರಿತಾಗಿ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಪರಿಣಿತರು ಒಟ್ಟಾಗಿ ಚರ್ಚಿಸಿ ಬರುವ ವರ್ಷದÀ ಮಳೆಗಾಲದ ಮುನ್ನ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ನಾಗರಿಕರ ಪರವಾಗಿ ಅವÀರು ಮನವಿ ಮಾಡಿದ್ದಾರೆ.