ಗುಡ್ಡೆಹೊಸೂರು, ಆ. 19: ಇಲ್ಲಿನ ತೆಪ್ಪದ ಕಂಡಿಯ ಸುಮಾರು 32 ಕುಟುಂಬಗಳ ಮನೆಗಳು ಕಾವೇರಿ ನದಿ ನೀರಿನಲ್ಲಿ ಮುಳುಗಿದ್ದವು. ಅವರನ್ನು ಗುಡ್ಡೆಹೊಸೂರು ಶಾಲೆಗೆ ಸ್ಥಳಾಂತರಿಸಲಾಗಿತ್ತು. ಪ್ರತಿ ಕುಟುಂಬಕ್ಕೆ ಸದ್ಯದ ಮಟ್ಟಿಗೆ ತಲಾ ರೂ. 10 ಸಾವಿರಗಳ ಚೆಕ್‍ನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ವಿತರಿಸಿದರು. ಈ ಸಂದರ್ಭ ಇಓ ಸುನಿಲ್‍ಕುಮಾರ್, ಕಂದಾಯ ಪರಿವೀಕ್ಷಕ ಮಧುಸೂದನ್, ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ಮತ್ತು ಪಂಚಾಯಿತಿ ಸದಸ್ಯರು ಹಾಜರಿದ್ದರು.