ಸೋಮವಾರಪೇಟೆ, ಆ. 19: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಭಕ್ತಿ ಗೀತೆಗಳ ಸ್ಪರ್ಧೆ ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ನಡೆಯಿತು. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು. ವೇದಿಕೆಯಲ್ಲಿ ತೀರ್ಪುಗಾರರಾದ ನಳಿನಿ ಗಣೇಶ್, ಚಂದ್ರಿಕಾ, ಕ.ಸಾ.ಪ. ಪದಾಧಿಕಾರಿಗಳಾದ ಎ.ಪಿ. ವೀರರಾಜು, ಕೆ.ಎ. ಆದಂ ಉಪಸ್ಥಿತರಿದ್ದರು.