ಸೋಮವಾರಪೇಟೆ,ಆ.19: ಈಗಾಗಲೇ ಶಿಥಿಲಾವಸ್ಥೆಗೆ ತಲುಪುತ್ತಿರುವ ಸೋಮವಾರಪೇಟೆ ತಾಲೂಕು ಕಚೇರಿಯ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿದ್ದು, ಮಳೆ ನೀರಿನಿಂದ ಸದ್ಯದ ಮಟ್ಟಿಗೆ ರಕ್ಷಣೆ ಪಡೆಯಲು, ಕಚೇರಿಯ ಕಿಟಕಿಗಳಿಗೆ ಗ್ಲಾಸ್ ಅಳವಡಿಸಲು ಸೂಚಿಸಿದ್ದಾರೆ.

ಅದರಂತೆ ಸೋಮವಾರಪೇಟೆ ತಾಲೂಕು ಕಚೇರಿಯ ಕಿಟಕಿಗಳಲ್ಲಿ ಕಚೇರಿಯೊಳಗೆ ಸಿಬ್ಬಂದಿಗಳು ಕುಳಿತು ಕೊಳ್ಳಲೂ ಸಹ ಅಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಿಟಕಿಗಳಿಗೆ ಪ್ಲಾಸ್ಟಿಕ್ ಕಟ್ಟಿಕೊಂಡು ಮಳೆ ನೀರನ್ನು ತಡೆಯುವ ಪ್ರಯತ್ನವನ್ನು ಸಿಬ್ಬಂದಿಗಳು ಮಾಡುತ್ತಲೇ ಬಂದಿದ್ದರು.