ವೀರಾಜಪೇಟೆ, ಆ. 19: ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ತಾ. 25 ರಂದು ನಡೆಯಲಿದೆ.

ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ವೀರಾಜಪೇಟೆ ಶಾಖೆಯ ಪೂರ್ವ ಭಾವಿ ಸಭೆಯು ಗೌರಿ ಕೆರೆಯ ರಸ್ತೆಯಲ್ಲಿರುವ ಶಾಖೆಯ ಕಚೇರಿಯಲ್ಲಿ ನಡೆಯಿತು.

ಮಹಾಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ ಅವರು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಎಲ್ಲಾ ಧರ್ಮಗಳು ಒಂದೇ ಎಂದು ಸಾರುವ ಒಂದು ಸಂಸ್ಥೆಯಾಗಿದ್ದು, ಇಲ್ಲಿ ಬಡವ ಬಲ್ಲಿದ ಮೇಲು ಕೀಳು ಎಂಬ ಭಾವನೆಗಳಿಗೆ ಅವಕಾಶವಿಲ್ಲದೆ ಎಲ್ಲರು ಸಮಾನ ಎಂಬದು ಮುಖ್ಯ. ಸಂಸ್ಥೆಯು ಹಲವು ವರ್ಷಗಳಿಂದ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದೆ. ಸಂಸ್ಥೆಯ ಮಾಹಾ ಸಭೆಯು ತಾ. 25 ರಂದು ನಗರದ ಮೀನುಪೇಟೆಯ ಚೈತನ್ಯ ಮಠಪುರ ಮುತ್ತಪ್ಪ ದೇವಲಾಯದಲ್ಲಿ ನಡೆಯಲಿದೆ.

ಅಂದು ವಿವಿಧ ಸ್ಥಳಗಳಿಂದ ಗಣ್ಯರು ಆಗಮಿಸಲಿದ್ದು ಸಂಸ್ಥೆಯ ಸದಸ್ಯರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಟಿ.ಅರ್. ಪ್ರಭಾಕರ್, ಗೌರವಾಧ್ಯಕ್ಷ ಅಚ್ಚುಕುಟ್ಟಿ ಮತ್ತು ಕಾರ್ಯದÀರ್ಶಿ ಪಿ.ಆರ್. ದಾಮೋದÀರ್ ಇವರುಗಳು ಉಪಸ್ಥಿತರಿದ್ದರು.