ಮಡಿಕೇರಿ, ಆ. 19: ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ 8 ಮಂದಿ ಅಧಿಕಾರಿಗಳನ್ನು ಪೊಲೀಸ್ ನಿರೀಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿ ಸರಕಾರ ವರ್ಗಾವಣೆಗೊಳಿಸಿದೆ. ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿಯಾಗಿದ್ದ ಎಂ. ಷಣ್ಮುಗಂ ಅವರನ್ನು ಮೈಸೂರು ನಗರ ವಿಶೇಷ ವಿಭಾಗಕ್ಕೆ, ವೀರಾಜಪೇಟೆ ನಗರ ಠಾಣಾಧಿಕಾರಿಯಾಗಿದ್ದ ಸಂತೋಷ್ ಕಶ್ಯಪ್ ಅವರನ್ನು ಹಾಸನ ಪಿಟಿಎಸ್‍ಗೆ, ಸುಂಟಿಕೊಪ್ಪ ಠಾಣಾಧಿಕಾರಿಯಾಗಿದ್ದ ಎಸ್.ಎನ್. ಜಯರಾಂ ಅವರನ್ನು ಕೆ.ಎಲ್.ಎ.ಗೆ, ಗೋಣಿಕೊಪ್ಪ ಠಾಣಾಧಿಕಾರಿ ಬಿ.ಎಸ್. ಶ್ರೀಧರ್ ಅವರನ್ನು ಎಸಿಬಿಗೆ, ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ್ ಅವರನ್ನು ಎಸಿಬಿಗೆ, ಶನಿವಾರಸಂತೆ ಠಾಣಾಧಿಕಾರಿಯಾಗಿದ್ದ ತಿಮ್ಮಶೆಟ್ಟಿ ಅವರನ್ನು ಮಂಗಳೂರು ಡಿಸಿಆರ್‍ಇಗೆ, ಕುಶಾಲನಗರ ಠಾಣಾಧಿಕಾರಿ ಪಿ. ಜಗದೀಶ್ ಅವರನ್ನು ಮಡಿಕೇರಿ ಚೆಸ್ಕಾಂಗೆ, ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಪಿ.ಪಿ. ಸೋಮೇಗೌಡ ಅವರನ್ನು ಎಎನ್‍ಎಫ್‍ಗೆ ವರ್ಗಾವಣೆ ಮಾಡಲಾಗಿದೆ. ಮಡಿಕೇರಿ ನಗರ ಮಹಿಳಾ ಪೊಲೀಸ್ ಠಾಣೆಗೆ ನಿರೀಕ್ಷಕರಾಗಿ ಕೆ. ಶಿಲ್ಪ ಎಂಬವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.