ಗೋಣಿಕೊಪ್ಪಲು, ಆ. 19: 10 ಲೀಟರ್ ಹಾಲು ನೀಡುತ್ತಿದ್ದ 70 ಸಾವಿರ ಮೌಲ್ಯದ ಗಬ್ಬದ ಹಸುವನ್ನು ಕಿಡಿಗೇಡಿಗಳು ಗುಂಡು ಹೊಡೆದು ಕೊಂದು ಮಾಂಸ ಮಾಡಿದ ಘಟನೆ ಪಾಲಿಬೆಟ್ಟ ಗ್ರಾಮದಲ್ಲಿ ನಡೆದಿದೆ ಹಾಲು ಮಾರಿ ಜೀವನ ನಡೆಸುತ್ತಿದ್ದ ಪಾಲಿಬೆಟ್ಟ ಶಾಸ್ತ್ರಿ ಹಳ್ಳಿ ನಿವಾಸಿ ದಯಾನಂದ ರೈ ಅವರೇ ಹಸು ಕಳೆದುಕೊಂಡ ರೈತರಾಗಿದ್ದಾರೆ. ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟ ದೊಳಗೆ ಈ ಕೃತ್ಯವನ್ನು ಕಿಡಿಗೇಡಿಗಳು ನಡೆಸಿದ್ದಾರೆ. ಕಿಡಿಗೇಡಿಗಳು ಮಾಂಸಕ್ಕಾಗಿ ಕೊಂದ ಗಬ್ಬದ ಹಸುವಿನ ಚÀರ್ಮವನ್ನು ಸುಲಿದು ಸ್ವಲ್ಪ ಮಾಂಸವನ್ನು ಕತ್ತರಿಸಿ ತೆಗೆದುಕೊಂಡು ಕಾಲ್ಕಿತ್ತಿದ್ದಾರೆ. ಹಸು ತನ್ನ ಕರುವಿ ನೊಂದಿಗೆ ಸತ್ತುಬಿದ್ದಿರುವ ಈ ಕರುಣಾ ಜನಕ ದೃಶ್ಯ ಮನಕಲುಕುವಂತಿತ್ತು.ಭಾನುವಾರ ಮುಂಜಾನೆ ಮೇಯಲು ಬಿಟ್ಟಿದ್ದ ಹಸು ಕೊಟ್ಟಿಗೆಗೆ ಹಿಂದಿರುಗಿ ಬಾರದೇ ಇದ್ದುದರಿಂದ ಹಸುವನ್ನು ಹುಡುಕಿಕೊಂಡು ಮಾಲೀಕ ದಯಾನಂದ ರೈ ತೆರಳಿದ್ದಾರೆ. ಹಸು ಬಾರದೇ ಇರುವ ವಿಚಾರವನ್ನು ತನ್ನ ಸ್ನೇಹಿತರಲ್ಲಿಯೂ ಹಂಚಿಕೊಂಡಿದ್ದಾರೆ. ಹಸು ಹುಡುಕಿ ಎಲ್ಲಿಯೂ ಪತ್ತೆಯಾಗದ ಕಾರಣ ಮನೆಗೆ ದಯಾನಂದ ರೈ ಹಿಂತಿರುಗಿದ್ದಾರೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಜಾನುವಾರುಗಳ ಕಳವು ಹೆಚ್ಚಾಗಿತ್ತು. ಈ ಅನುಮಾನದಲ್ಲಿದ್ದ ಕೆಲವರು ಭಾನುವಾರ ರಾತ್ರಿ 7.30 ಗಂಟೆ ಸಮಯದಲ್ಲಿ ಗುಂಡು ಹಾರಿದ ಶಬ್ದ ಕೇಳಿ ಬಂದ ಮಾರ್ಗವಾಗಿ ದಯಾನಂದ ರೈ ಅವರ ಹಸುವನ್ನು ಹುಡುಕಲು ತೆರಳಿದಾಗ ಸ್ಥಳೀಯರಿಗೆÀ ತೋಟದೊಳಗೆ ಕೊಂದ ಹಸುವನ್ನು ಮಾಂಸ ಮಾಡುತ್ತಿರುವ ಬಗ್ಗೆ ಕುರುಹು ದೊರೆತಿದೆ. ಸ್ಥಳೀಯರು ತೋಟದೊಳಗೆ ಹೆಜ್ಜೆ ಹಾಕು ತ್ತಿದ್ದಂತೆಯೇ ಮಾಂಸ ಮಾಡಲು ತಯಾರಿ ನಡೆಸುತ್ತಿದ್ದ ತಂಡವೊಂದು ಸ್ಥಳದಿಂದ ಪರಾರಿಯಾಗಿದೆ. ಜನÀರು ಸ್ಥಳಕ್ಕೆ ಹೋಗಿ ನೋಡಿದಾಗ ಗಬ್ಬದ ಹಸು ಸತ್ತು ಬಿದ್ದಿರುವದು ಮತ್ತು ಅದನ್ನು ಮಾಂಸ ಮಾಡಲು ತಯಾರಿ ನಡೆಸಿರುವದು ಗೋಚರಿಸಿದೆ. ಅಲ್ಲದೇ ಈ ತಂಡ ಅಲ್ಲಿಯೇ ಮದÀ್ಯ ಸೇವಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದುದು ಸಹ ಸ್ಥಳದಲ್ಲಿಯೇ ಬಿದ್ದಿದ್ದ ಮದ್ಯದ ಬಾಟಲಿಗಳಿಂದ ಗೊತ್ತಾಗಿದೆ. ಈ ಬಗ್ಗೆ ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾರ್ವಜನಿಕರ ಮಾಹಿತಿ ಮೇರೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
(ಮೊದಲ ಪುಟದಿಂದ) ಉಳಿದ ಆರೋಪಿಗಳನ್ನು ಸೆರೆಹಿಡಿಯಲು ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ಶುಂಠಿ ಕೃಷಿಯ ನೆಪದಲ್ಲಿ ಕೆಲವರು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾರದಲ್ಲಿ ಕನಿಷ್ಟವೆಂದರೂ ಎರಡರಿಂದ ಮೂರು ಹಸುಗಳು ಈ ವ್ಯಾಪ್ತಿಯಲ್ಲಿ ಕಾಣೆಯಾಗುತ್ತಿವೆ. ಕಿಡಿಗೇಡಿಗಳು ಬಿಟ್ಟು ಹೋದ ಹಸುವಿನ ತಲೆ ಹಾಗೂ ತ್ಯಾಜ್ಯ ವಸ್ತುಗಳನ್ನು ನಾಯಿಗಳು ಬೀದಿಯಲ್ಲಿ ಎಳೆದಾಡುತ್ತಿರುವದು ಈ ಕೃತ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತೋಟದ ವ್ಯವಸ್ಥಾಪಕ ಪೆÇಲೀಸರಿಗೆ ದೂರು ನೀಡಿದ್ದರೂ ಸಹ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶುಂಠಿ ಕೃಷಿ ಮಾಡುತ್ತಿರುವ ಸ್ಥಳದಿಂದ ಪಟಾಕಿ ಸಿಡಿಸಿ ನಂತರ ಗುಂಡು ಹಾರಿಸಿ ಹಸುಗಳನ್ನು ಕೊಲ್ಲಲು ಹುನ್ನಾರ ನಡೆಸುತ್ತಾರೆ. ಆನೆ ಓಡಿಸುವ ನೆಪದಲ್ಲಿ ಪಟಾಕಿ ಸಿಡಿಸಿ ಜನರ ಗಮನವನ್ನು ಬೇರೆಡೆ ಸೆಳೆದು ಈ ಕೃತ್ಯ ನಡೆಸಲಾಗುತ್ತಿದೆ. ಈ ಕೃತ್ಯದ ಬಗ್ಗೆ ಪೆÇಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಈ ದಂಧೆಗೆ ಕಡಿವಾಣ ಹಾಕಬೇಕೆಂದು ಜಿ.ಪಂ. ಮಾಜಿ ಸದಸ್ಯ ಕೊಲ್ಲೀರ ಧರ್ಮಜ ಒತ್ತಾಯಿಸಿದ್ದಾರೆ. 24 ಗಂಟೆಯೊಳಗೆ ಪೆÇಲೀಸರು ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ತೀವ್ರ ಹೋರಾಟ ನಡೆಸುವದಾಗಿ ಎಚ್ಚರಿಸಿದ್ದಾರೆ.
ಸ್ಥಳೀಯ ಕಿಡಿಗೇಡಿಗಳ ತಂಡ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಹೊಸೂರು ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಆಗ್ರಹಿಸಿದ್ದಾರೆ. ಈ ಸಂದರ್ಭ ಜಿ.ಪಂ. ಸದಸ್ಯ ಮೂಕಂಡ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಪಾಲಿಬೆಟ್ಟ ಗ್ರಾ.ಪಂ. ಸದಸ್ಯ ದೀಪಕ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
-ಚಿತ್ರ ವರದಿ : ಎನ್.ಎನ್. ದಿನೇಶ್, ವಾಸು, ಸುಧಿ, ಸುದ್ದಿಪುತ್ರ