ಮಡಿಕೇರಿ, ಆ. 18: ಇಲ್ಲಿನ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ತಾ. 24 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆ ಎರಡು ಗುಂಪುಗಳಲ್ಲಿ ನಡೆಯಲಿದ್ದು; ಒಂದರಿಂದ ಎರಡನೇ ತರಗತಿಯವರಿಗೆ ‘ಎ’ ಗುಂಪು ಹಾಗೂ 3 ರಿಂದ 4ನೇ ತರಗತಿಯವರೆಗೆ ‘ಬಿ’ ಎಂದು ವಿಂಗಡಿಸಲಾಗಿದೆ. ಭಾಗವಹಿಸುವವರು ತಾ. 20ರ ಒಳಗಾಗಿ ಇಸ್ಕಾನ್ ಶ್ರೀ ಜಗನ್ನಾಥ ಮಂದಿರ, ಅರುಣ್ ಸ್ಟೋರ್ಸ್ ಮೇಲ್ಭಾಗ, ಕಾಲೇಜು ರಸ್ತೆ, ಮಡಿಕೇರಿ ಇಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9448648483, 9448976411 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.