ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಲಕ್ಷ, ಲಕ್ಷ ರೂ.ಗಳ ಕಾಫಿ ತೋಟ, ಗದ್ದೆಗಳನ್ನು ಆಪೆÇೀಷನಗೈದಿದೆ. ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಕೇಟೋಳಿರ ಅಶೋಕ್ ಚಂಗಪ್ಪ ಅವರಿಗೆ ಸೇರಿದ ಒಂದು ಎಕರೆ ಮತ್ತು ಹರೀಶ್ ಪೂವಯ್ಯ ಅವರಿಗೆ ಸೇರಿದ ಕಾಲು ಎಕರೆ ಕಾಫಿ ತೋಟ ಭೂಕುಸಿತದಿಂದ ಸಂಪೂರ್ಣ ಮಣ್ಣು ಪಾಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸಮೀಪದಲ್ಲಿ ಹರಿಯುತ್ತಿರುವ ಹೊಳೆಗೆ ಭಾರೀ ಪ್ರಮಾಣದಲ್ಲಿ ಕಾಫಿ ಗಿಡಗಳೊಂದಿಗೆ ಬರೆ ಕುಸಿತ ಉಂಟಾಗಿರುವ ಕಾರಣ ಸುಮಾರು 30 ಅಡಿಗಳಷ್ಟು ದೂರದವರೆಗೆ ಹೊಳೆ ಮುಚ್ಚಿ ಹೋಗಿದ್ದು, ಪೂರ್ತಿ ನೀರು ಗದ್ದೆಯಲ್ಲಿ ಹರಿಯುತ್ತಿದೆ. ಅಶೋಕ್ ಮತ್ತು ಸಹೋದರರು ಗದ್ದೆ ನಾಟಿಗೆ ಪೈರು ಬೆಳೆಸಿದ್ದು ನೀರು ಗದ್ದೆಯಲ್ಲಿ ಹರಿಯುತ್ತಿರುವದರಿಂದ ಸುಮಾರು 15 ಎಕರೆ ಗದ್ದೆ ಕೃಷಿ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ.
- ಪಿ.ವಿ.ಪ್ರಭಾಕರ್