ಗೋಣಿಕೊಪ್ಪ ವರದಿ, ಆ. 17; ಪರಿಹಾರ ಕಿಟ್ ವಿತರಣೆ ವಿಚಾರದಲ್ಲಿ ಗಲಾಟೆ ಮಾಡಿಕೊಂಡ ಮಾನವ ಹಕ್ಕು ಸಮಿತಿ ಪದಾಧಿಕಾರಿಗಳ ನಡೆಯಿಂದ ಸಂತ್ರಸ್ತ್ತರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆಗೂ ಮುನ್ನ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.

ಮಾನವ ಹಕ್ಕು ಸಮಿತಿಯ ಪದಾಧಿಕಾರಿಗಳು ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಪರಿಹಾರ ಕೇಂದ್ರಕ್ಕೆ ಆಗಮಿಸಿ ತಡವಾಗಿ ಕೇಂದ್ರಕ್ಕೆ ಬಂದವರಿಗೂ ಕೂಡ ಕಿಟ್ ನೀಡಬೇಕೆಂದು ಒತ್ತಾಯಿಸಿದರು. ನೋಡೆಲ್ ಅಧಿಕಾರಿ, ಪೊಲೀಸರ ವಿರುದ್ಧ ಕಿರುಚಾಡಿ ಗಲಾಟೆ ಮಾಡಿಕೊಂಡರು. ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಗಲಾಟೆಗೆ ಮೂಲಕ ಕಾರಣರಾದ ಮಾನವ ಹಕ್ಕು ಸಮಿತಿ ಸದಸ್ಯೆ ಕುಸುಮಾವತಿಯನ್ನು ಠಾಣೆಗೆ ಕರೆಸಿ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ, ಪ್ರಕರಣಕ್ಕೆ ತೆರೆ ಎಳೆದರು.

ಪರಿಹಾರ ಕೇಂದ್ರಕ್ಕೆ ಆಗಮಿಸಿದ ಮಾನವ ಹಕ್ಕು ಸಮಿತಿಯ ಪ್ರಮುಖರಾದ ಶಾಂತಿ ಅಚ್ಚಪ್ಪ, ಕುಸುಮಾವತಿ ಇವರುಗಳು ಪಾಲಿಬೆಟ್ಟ ರಸ್ತೆಯ ಸೇತುವೆ ಸಮೀಪದ ಸಂತ್ರಸ್ತರಿಗೆ ಕೂಡಲೇ ಪರಿಹಾರ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ನೋಡೆಲ್ ಅಧಿಕಾರಿ ಸೀತಾಲಕ್ಷ್ಮಿ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮಧ್ಯಪ್ರವೇಶಿಸಿದ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಅವರ ಮೇಲೂ ಅನಾವಶ್ಯಕವಾಗಿ ಕಿರುಚಾಡಿದರು. ತಾನು ಸಂತ್ರಸ್ತೆ ನನಗೂ ತಕ್ಷಣ ಪರಿಹಾರ ಕಿಟ್ ವಿತರಿಸಬೇಕು ಎಂದು ಪೊನ್ನಮ್ಮ ಹಠ ಮಾಡಿದರು. ಅಧಿಕಾರಿಗಳ ಮೇಲೆ ಬೇಡದ ಪದಗಳ ಬಳಕೆ ಮಾಡಿ ಗಲಾಟೆ ನಡೆಸಿದರು. ಇದನ್ನು ಸಹಿಸಲಾಗದೆ ನೋಡೆಲ್ ಅಧಿಕಾರಿ ಸೀತಾಲಕ್ಷ್ಮಿ ಪರಿಸ್ಥಿತಿ ತಣ್ಣಗಾಗು ವವರೆಗೂ ಪೊಲೀಸ್ ಠಾಣೆ ಯಲ್ಲಿಯೇ ಕುಳಿತರು. ನಂತರ, ಕುಸುಮಾವತಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು.

ಗುರುತಿಸಿಕೊಳ್ಳಲು ಬಂದರು: ಗೋಣಿಕೊಪ್ಪ ಭಾಗದಲ್ಲಿ ಮನೆಗಳು ಮುಳುಗಿದ್ದ ಸಂದರ್ಭ ನೆರವಿಗೆ ಸ್ಥಳಕ್ಕೆ ಬಾರದ ಮಾನವ ಹಕ್ಕು ಸಮಿತಿ ಸದಸ್ಯರುಗಳು ತಮ್ಮನ್ನು ಗುರುತಿಸಿಕೊಳ್ಳಲು ಬಂದು ಜಗಳ ಮಾಡಿಕೊಂಡರು ಎಂಬ ಆರೋಪ ವ್ಯಕ್ತವಾಗಿದೆ. ಮುಳುಗಿದ್ದ ಸಂದರ್ಭ ಯಾರನ್ನು ದಡ ಸೇರಿಸಲು ಬಾರದ ಇವರುಗಳು, ಯಾರನ್ನು ಸಂತೈಸಿರಲಿಲ್ಲ. ಆದರೆ, ಪರಿಹಾರ ಕೇಂದ್ರದ ಕಿಟ್ ವಿತರಣೆ ಸಂದರ್ಭ ಜಗಳ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಉತ್ತಮವಾಗಿ ನಿರ್ವಹಣೆ ಮಾಡಿದ ಪರಿಹಾರ ಕೇಂದ್ರದ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಎತ್ತಿ ಕಟ್ಟಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂತು.

ಈ ಸಂದರ್ಭ ಜಿ.ಪಂ. ಸzಸ್ಯ ಸಿ.ಕೆ. ಬೋಪಣ್ಣ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜೆ.ಕೆ. ಸೋಮಣ್ಣ, ಮುರುಗ ಉಪಸ್ಥಿತರಿದ್ದರು.

-ಸುದ್ದಿಪುತ್ರ