ಸೋಮವಾರಪೇಟೆ, ಆ. 17: ಮಡಿಕೇರಿ ಮಾರ್ಗವಾಗಿ ಸೋಮವಾರಪೇಟೆ ಮೂಲಕ ಬೆಂಗಳೂರಿಗೆ ತೆರಳುವ ರಾಜ್ಯ ಸರ್ಕಾರಿ ಬಸ್ ಸಮೀಪದ ಹಟ್ಟಿಹೊಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದಿದ್ದು, ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.

ಇಂದು ಬೆಳಿಗ್ಗೆ ಹಟ್ಟಿಹೊಳೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಕಳೆದ ಪ್ರಾಕೃತಿಕ ವಿಕೋಪ ನಂತರ ಈ ರಸ್ತೆಯನ್ನು ದುರಸ್ತಿಪಡಿಸಲಾಗಿದ್ದು, ಬದಿಯಲ್ಲಿ ಚರಂಡಿ ನಿರ್ಮಿಸಲಾಗಿತ್ತು.

ಸರ್ಕಾರಿ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದ್ದರಿಂದ ಗುಂಡಿಯೊಳಗೆ ಚಕ್ರ ಸಿಲುಕಿಕೊಂಡು ಎಡ ಬದಿಗೆ ವಾಲಿದೆ. ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವದೇ ಅಪಾಯ ಸಂಭವಿಸಿಲ್ಲ.