ಮಡಿಕೇರಿ, ಆ. 16: ಭಾರತದ 73ನೇ ಸ್ವಾತಂತ್ರ್ಯೋತ್ಸವವನ್ನು ನಾಡಿನಾದ್ಯಂತ ಸರಕಾರಿ ಕಚೇರಿಗಳು, ಶಾಲೆಗಳಲ್ಲಿ, ಸಂಘ-ಸಂಸ್ಥೆಗಳ ವತಿಯಿಂದ ಆಚರಿಸಲಾಗಿದ್ದು, ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.

ಗೋಣಿಕೊಪ್ಪಲು: ಭಾರತವು ವಿಶ್ವದಲ್ಲಿಯೇ ಅಭಿವೃದ್ಧಿ ಪಥದತ್ತ ಮುನ್ನಡೆ ಯುತ್ತಿರುವ ಸ್ವಾವಲಂಬನೆಯ ರಾಷ್ಟ್ರವಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ಹುಬ್ಬೇರಿಸುವಂತದ್ದು, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದಲ್ಲಿಯೂ ಭಾರತವು ಮುಂಚೂಣಿಯಲ್ಲಿದೆ.

ಹೀಗಿದ್ದೂ ಭಾರತದಲ್ಲಿ ಭಯೋತ್ಪಾದನೆ, ಜಾತೀಯತೆ, ಭ್ರಷ್ಟಾಚಾರ ವಿಚಾರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ವೀರಾಜಪೇಟೆ ಜೆಎಂಎಫ್‍ಸಿ ಮತ್ತು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಪೆÇನ್ನಂಪೇಟೆ ನ್ಯಾಯಾಲಯ ಆವರಣದಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮೂಲತಃ ಗೋಣಿಕೊಪ್ಪಲಿನವರಾಗಿದ್ದು ಬೆಂಗಳೂರು ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿವಿಲ್ ನ್ಯಾಯಾಧೀಶೆ ಶಿಲ್ಪ ಗಣೇಶ್ ಮಾತನಾಡಿ, ಕೊಡಗಿನಲ್ಲಿ ಜಲವಿಪತ್ತು ಸಂಭವಿಸಿದ್ದರೂ ಇಂದು ಎಲ್ಲೆಡೆ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿರುವದು ದೇಶಪ್ರೇಮದ ಸಂಕೇತ. ಕೊಡಗಿನ ಪ್ರಕೃತಿ ವಿಕೋಪಕ್ಕೆ ಮನುಷ್ಯನ ದೌರ್ಜನ್ಯವೇ ಕಾರಣ ಎಂದರು.

ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ. ಕಾವೇರಪ್ಪ ಅವರು, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ತ್ಯಾಗಬಲಿದಾನ ಮಾಡಿದವರ ನೆನಪಿಸುವ ದಿನವಾಗಿದೆ. ಪ್ರಕೃತಿ ವಿಕೋಪದ ಹಿನ್ನೆಲೆ ಈ ಬಾರಿ ಸಂಘದ ಆಶ್ರಯದಲ್ಲಿ ಸರಳವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾದ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್, ಪೆÇನ್ನಂಪೇಟೆ ನ್ಯಾಯಾಲಯ ಸಿಬ್ಬಂದಿ ದಿನೇಶ್‍ಕುಮಾರ್, ವಕೀಲ ಕೆ.ಬಿ. ಸಂಜೀವ್ ಮುಂತಾದವರು ಮಾತನಾಡಿದರು.

ವಕೀಲರ ಸಂಘದ ವತಿಯಿಂದ ಮಾಜಿ ಅಧ್ಯಕ್ಷ ದಿ. ಎಂ.ಬಿ. ನಾಣಯ್ಯ ಜ್ಞಾಪಕಾರ್ಥ ಅವರ ತಾಯಿ ರಮಾಬಾಯಿ ಸ್ಥಾಪಿಸಿದ ದತ್ತಿನಿಧಿ ಮೊತ್ತದ ಚೆಕ್ ಅನ್ನು, ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಕೀಲ ಎಂ.ಜಿ. ರಾಖೇಶ್ ಅವರ ಪುತ್ರ ಲೇಖನ್ ಕುಶಾಲಪ್ಪರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಶ್ರೀಧರ್, ಪೆÇನ್ನಂಪೇಟೆ ಪೆÇಲೀಸ್ ಉಪ ನಿರೀಕ್ಷಕ ಮಹೇಶ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಜಿ. ರಾಖೇಶ್, ವಕೀಲರು, ನ್ಯಾಯಾಲಯ ಸಿಬ್ಬಂದಿಗಳು, ಪೆÇಲೀಸರು ಉಪಸ್ಥಿತರಿದ್ದರು.

ಚೆಟ್ಟಳ್ಳಿ: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರಿಗೆ ಸಿಹಿ ಹಂಚುವ ಮೂಲಕ ದೇಶದ 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋನಾ ಭೀಮಯ್ಯ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ಸಂತೋಷ್, ದೇಶದ ಜೊತೆಗೆ ದೇಶೀಯರ ಮನಸ್ಸು ಸ್ವಚ್ಛವಾಗಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 73 ವರ್ಷಗಳೇ ಕಳೆದು ಹೋದರೂ ವೈಯಕ್ತಿಕ ಸ್ವಾತಂತ್ರ್ಯದಿಂದ ಹಲವರು ವಂಚಿತರಾಗಿದ್ದಾರೆ. ಇದು ಬದಲಾಗಬೇಕು ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಇಂದಿನ ದಿನ ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸಬೇಕಾದ ದಿನ ನಾವು ಕೂಡ ಅದರ ಭಾಗಿಯಾಗೋಣ ಎಂದರು. ತದನಂತರ ನೆರೆದಿದ್ದ ಸರ್ವರಿಗೂ ಸಿಹಿ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಹಂಸ, ಸುರೇಶ್, ನಿರಣ್, ಸುರೇಶ್ ಅಯ್ಯಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಡಿಕೇರಿ: ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕ ಹಾಗೂ ಮಾಲೀಕರ ಸಂಘದ ವತಿಯಿಂದ ನಗರದ ಕಾವೇರಿ ಕಾರ್‍ಕೇರ್ ಆವರಣದಲ್ಲಿ ಸಂಘದ ಅಧ್ಯಕ್ಷ ರಮೇಶ್ ಹಾಗೂ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಲಾಯಿತು. ನಂತರ ಸಂಘದ ಅಧ್ಯಕ್ಷ ರಮೇಶ್, ಸಲಹೆಗಾರ ಚಿತ್ರಕುಮಾರ್, ಕಾರ್ಯದರ್ಶಿ ಲೋಕೇಶ್ ಸಂಘವನ್ನುದ್ದೇಶಿಸಿ ಹಿತನುಡಿಗಳನ್ನಾಡಿದರು. ಜಕ್ರಿಯ ಅವರ ಮನೆ ಧಾರಾಕಾರ ಮಳೆಯಿಂದಾಗಿ ಹಾನಿಗೊಂಡಿದ್ದು ಅವರಿಗೆ ಸಂಘದ ಪರವಾಗಿ ರೂ. 5 ಸಾವಿರದ ಚೆಕ್ಕನ್ನು ನೀಡಲಾಯಿತು. ಚಂದ್ರ ಅವರು ವಂದಿಸಿದರು.

ಅಮ್ಮತ್ತಿ: ಹಿರಿಯರ ವಿಶ್ರಾಂತಿ ಕೇಂದ್ರದ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಿಸಲಾಯಿತು. ಧ್ವಜಾರೋಹಣ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ನಿವೃತ್ತ ಸೈನಿಕರು ಹಾಗೂ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಯು. ಗಣಪತಿ ಮಾತನಾಡಿದರು.

ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕ್ಯಾಚಂಡ ಎಂ. ಕುಶಾಲಪ್ಪ, ಕುಟ್ಟಂಡ ಅಪ್ಪಚ್ಚು , ಮಾಚಿಮಂಡ ಸುರೇಶ್ ಅಯ್ಯಪ್ಪ ಹಾUಗೂ ಇನ್ನಿತರರು ಇದ್ದರು.ವೀರಾಜಪೇಟೆ: ವೀರಾಜಪೇಟೆ ತಾಲೂಕಿನಲ್ಲಿ ಅತೀಯಾದ ಮಳೆಯಿಂದಾಗಿ ತೋರದಲ್ಲಿ ಕೊರ್ತಿಕಾಡಿನಲ್ಲಿ ಬೆಟ್ಟ ಕುಸಿದು ಹತ್ತು ಮಂದಿ ಸಾವನ್ನಪ್ಪಿದ ಕಾರಣ ಸ್ವಾತಂತ್ರ್ಯೋತ್ಸವವನ್ನು ಸಂತಾಪದಿಂದ ಆಚರಿಸುವಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ವೀರಾಜಪೇಟೆ ಸಮೀಪದ ತೋರ, ಬೂದಿಮಾಳ, ರಾಮನಗರ ಹೆಗ್ಗಳ ಸಂತ್ರಸ್ತರೊಂದಿಗೆ ಹೆಗ್ಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಬೆಟ್ಟ ಕುಸಿದು ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ. ಚೋಂದಮ್ಮ, ಉಪಾಧ್ಯಕ್ಷ ವಸಂತ ಕಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ಎಂ. ಸುನೀತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಂ.ಜೆ. ದಮಯಂತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಕಾಂತ್, ಸೋಮಶೇಖರ್ ಹಾಗೂ ಅಲ್ಲಿನ ಪರಿಹಾರ ಕೇಂದ್ರದಲ್ಲಿರುವ 353 ಸಂತ್ರಸ್ತರುಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಮಡಿಕೇರಿ: ಇಲ್ಲಿಗೆ ಸಮೀಪದ ದೇಚೂರು-ಬಾಣೆಮೊಟ್ಟೆ ಅಂಗನವಾಡಿ ಕೇಂದ್ರದ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಶ್ರೀನಿಧಿ ಸಂಘದ ಮಾಜಿ ಅಧ್ಯಕ್ಷೆ ಸುಂದರಿ ಮಾಚಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಸಿಹಿ ಹಂಚುವ ಮೂಲಕ ಪುಟಾಣಿಗಳಿಗೆ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಲಾಯಿತು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಹಾಗೂ ಶ್ರೀನಿಧಿ ಸಂಘದ ಸದಸ್ಯೆಯರು, ಅಂಗನವಾಡಿ ಕೇಂದ್ರದ ಪುಟಾಣಿಗಳು ಹಾಜರಿದ್ದರು.

ಕರಡ: ಸರಕಾರಿ ಹಿರಿಯ ಪ್ರಾಥಮಿಕ ಕರಡ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ನರಿಯಂದಡ ಗ್ರಾ.ಪಂ. ಅಧ್ಯಕ್ಷೆ ಬೇಬಿ ಶಿವಪ್ಪ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಹೆಚ್.ಕೆ. ಚಂಗಪ್ಪ, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಸಹ ಶಿಕ್ಷಕಿ ಡಿ.ಕೆ. ಲೀಲಾವತಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಬಿ.ಎಂ. ನಿರ್ಮಲ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಿಂದ ದಿನದ ಮಹತ್ವದ ಕುರಿತು ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಭಾಷಣ ಮಾಡಲಾಯಿತು. ದೇಶಭಕ್ತಿ ಗೀತೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.

ಕರ್ಣಂಗೇರಿ: ಮಡಿಕೇರಿ ತಾಲೂಕು ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ವಿದ್ಯಾ ಭಾರತಿ ಬಡಾವಣೆ, ಚಂದ್ರಗಿರಿ ಸಮುದಾಯ ಭವನ ಹಾಗೂ ಮೊಣಕಾಲ್ಮೂರು ಶಾಲೆಯಲ್ಲಿ ಸ್ಫೂರ್ತಿ ಯುವಕ ಸಂಘದ ಸಹಯೋಗದೊಂದಿಗೆ 73ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿದ್ಯಾ ಭಾರತಿ ಬಡಾವಣೆಯಲ್ಲಿ ಕುಡಿಯುವ ನೀರಿನ ಹೊಸ ಕೊಳವೆ ಬಾವಿಯನ್ನು ಇದೇ ಸಂದರ್ಭ ಸಾರ್ವಜನಿಕರ ಉಪಯೊಗಕ್ಕೆ ಬಿಟ್ಟು ಕೊಡಲಾಯಿತು.

ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ಹಿರಿಯರಾದ ವಿಠಲ್‍ರೈ, ವಿಜಯಕುಮಾರ್, ಸ್ಫೂರ್ತಿ ಯುವಕ ಸಂಘದ ಅಧ್ಯಕ್ಷÀ ರವಿಚಂದ್ರ, ಸಂಘದ ಸದಸ್ಯ ಹಾಗೂ ಪತ್ರಕರ್ತ ರಂಜಿತ್, ಸದಸ್ಯರಾದ ಮಹೇಶ್, ವಿಜು, ಮಂಜುನಾಥ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ವಿವರಿಸಿದ ಗಣ್ಯರು ನೆರೆದಿದ್ದವರಿಗೆ ಸಿಹಿ ಹಂಚಿದರು.ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 73ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಕೋಟೆ ಆವರಣದಲ್ಲಿರುವ ಕಸಾಪ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಧ್ವಜಾರೋಹಣ ನೆರವೇರಿಸಿದರು. ಪ್ರಕೃತಿ ವಿಕೋಪ ಹಿನ್ನೆಲೆ ಸರಳವಾಗಿ ಆಚರಿಸುತ್ತಿರುವದಾಗಿ ಹೇಳಿದರು. ಮುಂಬರುವ ದಿನಗಳಲ್ಲಿ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ನಿರ್ದೇಶಕ ಕೋಡಿ ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ಡಾ. ಕೂಡಕಂಡಿ ದಯಾನಂದ, ನಿರ್ದೇಶಕಿ ಪರ್ಲಕೋಟಿ ಸುನಿತಾ ಪ್ರೀತು, ವಸಂತ, ಕಚೇರಿ ಸಿಬ್ಬಂದಿ ಶ್ವೇತಾ ಇದ್ದರು.

ಸೋಮವಾರಪೇಟೆ: ತಾಲೂಕಿನ ಯಡವನಾಡು ಗ್ರಾಮದಲ್ಲಿ ಪ್ರಕೃತಿ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಯಡವನಾಡು, ಹುದುಗೂರು, ಹಾರಂಗಿ, ಸೀತೆಗದ್ದೆ, ಮಾವಿನಹಳ್ಳ ಗ್ರಾಮಸ್ಥರು ಒಂದಾಗಿ ಕಲೆತು 25 ವರ್ಷದ ಹಿಂದೆ ರಸ್ತೆ ಬದಿ ಗಿಡ ನೆಟ್ಟು ಪೋಷಿಸಿದ ವ್ಯಕ್ತಿಯನ್ನು ಸನ್ಮಾನಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ನಡೆಸಿ, ಕೇಕ್ ಕತ್ತರಿಸಿದರು.

1995 ರಲ್ಲಿ ಹುದುಗೂರು ಗ್ರಾಮದ ಬೋಪಣ್ಣ ಅವರು ಹಾರಂಗಿ, ಯಡವನಾಡು ರಸ್ತೆ ಕೂಡುವಲ್ಲಿ ಒಂದು ಸಸಿ ನೆಟ್ಟು ಪೋಷಿಸಿದರು. ಆ ಮರಕ್ಕೆ ಇಂದಿಗೆ 25 ವರ್ಷ ತುಂಬಿದ ಹಿನ್ನೆಲೆ ಮರದ ನೆರಳಿನಲ್ಲಿ ಕಾರ್ಯಕ್ರಮ ಆಯೋಜಿಸಿ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು.

ಇಪ್ಪತ್ತೈದು ವರ್ಷದ ಹಿಂದೆ ನೆಟ್ಟಿದ್ದ ಗಿಡ ಇಂದು ಹೆಮ್ಮರವಾಗಿ ಬೆಳೆದು ನೂರಾರು ಜನರಿಗೆ ನೆರಳಾಗಿದೆ. ಗಿಡಗಳ ಮಹತ್ವ ತಿಳಿಸುವದರೊಂದಿಗೆ ಮುಂದಿನ ಪೀಳಿಗೆಗೂ ಪರಿಸರದ ಮಹತ್ವ ತಿಳಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

ಈ ಸಂದರ್ಭ ಪ್ರಮುಖರಾದ ಕೋಮಾರಪ್ಪ, ರಮೇಶ್, ಸುರೇಶ್, ಮಲ್ಲಪ್ಪ, ಗಣೇಶ್, ಪ್ರಶಾಂತ್, ಶಂಭುಗೌಡ್ರು, ಉದಯ, ತೆಕ್ಕಡೆ ಸಾಬು, ಸಂಪಿಗೆ ಪ್ರವೀಣ್, ಹೇಮಂತ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ರವಿ, ಐಗೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು.

ಚೆಟ್ಟಳ್ಳಿ: ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಲಿಯಾಕತ್ ಅಲಿಯವರು ಧ್ವಜಾರೋಹಣಗೈದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆಯವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಚಂದ್ರಕುಮಾರ್ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು.

ಪ್ರವಾಹ ಹಾಗೂ ಭೂಕುಸಿತದಿಂದ ನಿರಾಶ್ರಿತರಾಗಿರುವಂತಹವರ ಕಣ್ಣೀರೊರೆಸುವಂತಹ ರೀತಿಯಲ್ಲಿನ ಸೇವಾಮನೋಭಾವವನ್ನು ಬೆಳೆಸಿಕೊಂಡು ಈ ದಿನವನ್ನು ಅರ್ಥಪೂರ್ಣವಾದ ರೀತಿಯಲ್ಲಿ ನಾವು ಆಚರಿಸಬೇಕು. ಅದೇ ರೀತಿ ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವಂತಹ ಅವರ ಕುರಿತು ಹೆಚ್ಚು ಹೆಚ್ಚು ಕಲಿಯುವಂತಹ ಮನೋಭಾವವನ್ನು ರೂಡಿಸಬೇಕೆಂದು ಮುಖ್ಯ ಭಾಷಣದಲ್ಲಿ ತಿಳಿಸಿದರು. ಸಂಸ್ಥೆಯ ಉಪನ್ಯಾಸಕ ಶಕೀರ್ ಮಾಷ್ಟರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಷಂಶುದ್ದೀನ್ ವೀರಾಜಪೇಟೆ, ಫೈಝಲ್ ಚೇರಂಬಾಣೆ, ಹುಸೈನ್ ಹಾಜಿ, ತಫ್ಸೀರ್ ಸೋಮವಾರಪೇಟೆ ಉಪಸ್ಥಿತರಿದ್ದರು. ಅಬ್ದುಲ್ ಜಲೀಲ್ ಅಮೀನಿ ಸ್ವಾಗತಿಸಿ, ವಂದಿಸಿದರು.

ಸಂಪಾಜೆ: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಡಗು-ಸಂಪಾಜೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ, ಕಂದಾಯ ಪರಿವೀಕ್ಷಕ ಸದಾನಂದ, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಪಂಚಾಯಿತಿ ಸದಸ್ಯೆ ರಮಾದೇವಿ ಕಳಗಿ, ಗಿರಿಜಾ ಚೆಡಾವು, ಕೃಷ್ಣ ಬೆಳ್ಚಪಾಡ, ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಮತ್ತು ಕಚೇರಿಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಮಡಿಕೇರಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ 73ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಆಬ್ರಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮಡಿಕೇರಿ ನಗರಧ್ಯಾಕ್ಷ ಕೆ.ಯು. ಅಬ್ದುಲ್ ರಜಾಕ್, ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗದ ಅಧ್ಯಕ್ಷ ತೆನ್ನೀರಾ ಮೈನಾ, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಮೂಡಾ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ಜಿಲ್ಲಾ ವಕ್ತಾರ ಟಿ.ಈ. ಸುರೇಶ್, ಮಾಜಿ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ಡಿಸಿಸಿ ಸದಸ್ಯ ಹನೀಫ್, ಕಾನೆಹಿತ್ಲು ಮೊಣ್ಣಪ್ಪ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಮರಗೋಡು: ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ಧ್ವಜಾರೋಹಣ ನೆರವೇರಿಸಿದರು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟೆಮಾಡಿನ ಪರಂಬು ಪೈಸಾರಿಯ 350 ಕ್ಕೂ ಮಿಕ್ಕ ಮಂದಿ ಸಂಸ್ಥೆಯ ಸಾಂತ್ವನ ಕೇಂದ್ರದಲ್ಲಿದ್ದು ಅವರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡರು. ಪರಿಹಾರ ಕೇಂದ್ರದ ನೋಡಲ್ ಅಧಿಕಾರಿ ಗಿರೀಶ್, ಭಾರತಿ ಹೈಸ್ಕೂಲ್ ಸೊಸೈಟಿಯ ಕಾರ್ಯದರ್ಶಿ ದುಶ್ಯಂತ್, ನಿರ್ದೇಶಕ ಪಿ.ಶರತ್, ಮರಗೊಡು ಪಂಚಾಯಿತಿ ಅಧ್ಯಕ್ಷ ಬಿ. ಮೋಹನ್, ಹೊಸ್ಕೇರಿ ಪಂಚಾಯಿತಿ ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಮಹಮ್ಮದ್ ಅಲಿ, ಪ್ರಾಂಶುಪಾಲ ಪಿ.ಟಿ. ಶಾಜಿ, ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಮರಗೋಡು ಪಿ.ಡಿ.ಓ. ಆಶಾಕುಮಾರಿ, ಪಂಚಾಯಿತಿ ಸದಸ್ಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು. ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳಿಗೆ ಕಲಾ ತರಗತಿ ನಡೆಸುತ್ತಿದ್ದು, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕ ರೂಪೇಶ್ ಪ್ರಾಯೋಜಿಸಿದ ಬಹುಮಾನಗಳನ್ನು ಸಾಂತ್ವನ ಕೇಂದ್ರದ ಅಡುಗೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಡುಗೆ ಸಿಬ್ಬಂದಿಗಳ ಮೂಲಕ ಈ ಸಂದರ್ಭ ವಿತರಿಸಲಾಯಿತು.

ಅಮ್ಮತ್ತಿ: ಅಮ್ಮತ್ತಿಯ ಗುಡ್‍ಶೆಫರ್ಡ್ ಶಾಲೆಯಲ್ಲಿ ಸರಳ ರೀತಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ಮರಿಯಾ ತೆರೇಸಾ ಅವರು ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿನಿ ರೋನ ದೇಶಭಕ್ತಿ ಗೀತೆ ಹಾಡಿ ಗಮನ ಸೆಳೆದಳು.

ಕಾರ್ಯಕ್ರಮದಲ್ಲಿ ಸಿಸ್ಟರ್ ಲೀಮ, ವಿದ್ಯಾರ್ಥಿ ನಾಯಕಿ ಮರೀನ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

* ಅಮ್ಮತ್ತಿಯ ನೇತಾಜಿ ಶಾಲೆಯ ಪ್ರಾಂಶುಪಾಲೆ ಜûರೀನ ಖಾನಂ ಅವರು ಧ್ವಜಾರೋಹಣ ಮಾಡಿದರು. ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನವನ್ನು ಕೊಂಡಾಡಿದರು. ಈ ಸಂದರ್ಭ ಶಾಲೆಯ ದೈಹಿಕ ಶಿಕ್ಷಕ ಆಶಿಕ್, ಶಿಕ್ಷಕರು ಉಪಸ್ಥಿತರಿದ್ದರು.

* ಅಮ್ಮತ್ತಿ ಪ್ರೌಢಶಾಲೆಯಲ್ಲಿ ಸುಂದರವಾದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಪ್ರಾಂಶುಪಾಲ ಸದಾನಂದ ಧ್ವಜಾರೋಹಣ ಮಾಡಿ ಸಂದೇಶ ಭಾಷಣ ಮಾಡಿದರು.

ಮಡಿಕೇರಿ: ಮೂಲಿಕಾ ಸಸ್ಯಗಳನ್ನು ಬೆಳೆಸುವದರಿಂದ ಪ್ರಕೃತಿ ಹಾಗೂ ಮನುಕುಲಕ್ಕೆ ಅತೀವ ಲಾಭವಿದ್ದು ಅದನ್ನು ಅರ್ಥಮಾಡಿಕೊಂಡು ಸಾರ್ವಜನಿಕರು ಸಸ್ಯಗಳನ್ನು ಬೆಳೆಸಿ ಪ್ರಕೃತಿ ಮಾತೆಗೆ ತಮ್ಮ ಕರ್ತವ್ಯ ಮಾಡುವಂತಾಗಬೇಕೆಂಬ ಯೋಜನೆಯಿಂದ ಕೊಡಗು ನೀಮಾ ವತಿಯಿಂದ ವಿವಿಧೆಡೆ ಸ್ವಾತಂತ್ರ್ಯೋತ್ಸವ ಸಂದರ್ಭ ಸುಮಾರು 100 ಔಷಧೀಯ ಸಸ್ಯಗಳನ್ನು ಶಾಲೆ ಹಾಗೂ ಸಾರ್ವಜನಿಕರಿಗೆ ಹಂಚಲಾಯಿತು. ಕಾರ್ಯ ಕ್ರಮದಲ್ಲಿ ಡಾ. ಸುಬ್ರಮಣ್ಯ ರಾವ್, ಡಾ. ಈಶ್ವರಿ ಉದಯಶಂಕರ, ಡಾ. ಅರುಣಾ ಕುಲಕರ್ಣಿ, ಡಾ. ಉದಯ ಶಂಕರ್, ಡಾ.ಪುರುಷೋತ್ತಮ, ನೀಮಾ ಕಾರ್ಯದರ್ಶಿ ಡಾ. ಕುಲಕರ್ಣಿ, ಅಧ್ಯಕ್ಷ ಡಾ. ರಾಜಾರಾಮ ಭಾಗವಹಿಸಿದ್ದರು. ಮಡಿಕೇರಿಯ ಬಸಪ್ಪ ಶಿಶು ವಿಹಾರ ಮಹದೇವಪೇಟೆ ಮಹಿಳಾ ಸಂಘದ ಮಹಿಳೆಯರಿಗೆ, ಬೆಕ್ಕೆಸೊಡ್ಲೂರು ಶಾಲಾ ಮಕ್ಕಳಿಗೆ, ಮಾದಾಪುರದ ಶಾಲೆಯಲ್ಲಿ ಸಸ್ಯ ಸಂವರ್ಧನೆ ಕಾರ್ಯಕ್ರಮದಡಿ ಸಸ್ಯಗಳನ್ನು ವಿತರಿಸಲಾಯಿತು.