ವೀರಾಜಪೇಟೆ, ಆ. 16: ಭಾರೀ ಮಳೆಯಿಂದ ಮನೆ ಹಾನಿಗೊಳಗಾದ ತೋರ, ಬೂದಿಮಳ, ಹೆಗ್ಗಳ ಗ್ರಾಮದ ರಾಮನಗರ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ವೀರಾಜಪೇಟೆ ಲಯನ್ಸ್ ಸಂಸ್ಥೆಯ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು

ಸಾಮಗ್ರಿಗಳನ್ನು ವಿತರಿಸುವ ಸಂದರ್ಭ ವೀರಾಜಪೇಟೆ ಲಯನ್ಸ್ ಅಧ್ಯಕ್ಷ ಪೌಲ್ ಕ್ಷೇವಿಯರ್, ಕಾರ್ಯದರ್ಶಿ ಎ. ಅಜಿತ್, ಖಜಾಂಚಿ ಮಂಡೇಟಿರ ಸುರೇಶ್, ಸದಸ್ಯರಾದ ವಿಕ್ರಂ ಚಂಗಪ್ಪ, ಬಿ.ಎ. ಕೃಷ್ಣಮೂರ್ತಿ, ಪುಟ್ಟಿಚಂಡ ನರೇಂದ್ರ ಮುಂತಾದವರು ಇದ್ದರು.