ಮಡಿಕೇರಿ, ಆ. 16: ಭಾರತೀಯ ಭೂಗರ್ಭ ಸಂಶೋಧನಾ ಇಲಾಖೆಯ ವಿಜ್ಞಾನಿಗಳಿಬ್ಬರು ಇಂದು ನಗರಕ್ಕೆ ಆಗಮಿಸಿದ್ದು, ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ತಾ. 17ರಂದು (ಇಂದು) ವೀರಾಜಪೇಟೆಯ ಮಲೆತಿರಿಕೆ ಅಯ್ಯಪ್ಪಬೆಟ್ಟ ಹಾಗೂ ಇತರೆಡೆಗಳಲ್ಲಿ ಬಂಡೆಗಳ ನಡುವೆ ಕಾಣಿಸಿಕೊಂಡಿರುವ ಬಿರುಕು ಇತ್ಯಾದಿ ಬಗ್ಗೆ ಖುದ್ದು ಪರಿವೀಕ್ಷಣೆ ನಡೆಸಲಿದ್ದಾರೆ. ಆ ನಂತರ ನಿಖರವಾಗಿ ಇಂತಹ ಆತಂಕಕಾರಿ ಘಟನೆಗೆ ಕಾರಣ ತಿಳಿಯಲು ಪ್ರಯತ್ನಿಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.