ಚೆಟ್ಟಳ್ಳಿ, ಆ. 14: ಕೊಡಗು ಹೆಲ್ಪ್ ಲೈನ್ ವಾಟ್ಸಾಪ್ ಗ್ರೂಪ್ ವತಿಯಿಂದ ಕುಶಾಲನಗರದ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಕುಶಾಲನಗರದ ಇಂದಿರಾ ಬಡಾವಣೆ, ಬಿದ್ದಪ್ಪ ಬಡಾವಣೆಯ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ ಕೊಡಗು ಹೆಲ್ಪ್ ಲೈನ್ ವಾಟ್ಸಾಪ್ ಗ್ರೂಪ್ ತಂಡದವರು, ಕಳೆದ ಬಾರಿ ಕೊಡಗು ಪ್ರವಾಹಕ್ಕೆ ತುತ್ತಾದ ವೇಳೆಯೂ ನೆರೆ ಸಂತ್ರಸ್ತರಿಗೆ ಅವಶ್ಯಕ ವಸ್ತುಗಳನ್ನು ನೀಡಿದ್ದೆವು. ಅದೇ ರೀತಿ ಈ ಬಾರಿಯೂ ಕೂಡಾ ಬಡ ನೆರೆ ಸಂತ್ರಸ್ತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ನೀಡಿದ್ದೇವೆ ಎಂದರು.

ಐ ಕೇರ್ ಟ್ರಸ್ಟ್‍ನ ಪ್ರಮುಖರಾದ ಆಬಿದ್ ಝೈನ್ ಮಾತನಾಡಿ, ಕಳೆದ ಬಾರಿ ಕೊಡಗು ಪ್ರವಾಹಕ್ಕೆ ತುತ್ತಾದ ವೇಳೆ ನೆರೆ ಸಂತ್ರಸ್ತರಿಗೆ ಸಿಗಬೇಕಾದ ವಸ್ತುಗಳು ದುರುಪಯೋಗವಾಗಿದ್ದು, ಈ ಹಿನ್ನೆಲೆ ನೈಜ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳಾಗಲಿ, ಅವಶ್ಯಕ ವಸ್ತುಗಳಾಗಲಿ ದೊರಕುತ್ತಿಲ್ಲ. ಸಾರ್ವಜನಿಕರು ಬೇಕಾದ ವಸ್ತುಗಳನ್ನು ಪಡೆದು ಉಳಿದವುಗಳನ್ನು ಇಲ್ಲದವರಿಗೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಕೊಡಗು ಹೆಲ್ಪ್-ಲೈನ್ ಸದಸ್ಯರಾದ ಸಾದಿಕ್ ಕುಂಜಿಲ, ಶಾಹಿದ್ ಕುಂಜಿಲ, ಶರೀಫ್ ಕುಂಜಿಲ, ಮಿಕ್ಕು ಕೊಟ್ಟಮುಡಿ, ಉನೈಸ್ ಕೊಟ್ಟಮುಡಿ, ಹೋಬಳಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹನೀಫ್, ಮೊಯಿದೀನ್ ಇದ್ದರು