ಕರಿಕೆ, ಆ. 14: ಕರಿಕೆ-ಭಾಗಮಂಡಲ ರಸ್ತೆಯ ಹದಿಮೂರನೇ ಮೈಲು ಬಳಿ ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ ಬದಿಯ ಮರವೊಂದು ಬಾಗಿ ಬುಡ ಸಮೇತ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಲೋಕೋಪಯೋಗಿ ಇಲಾಖೆ ಮಾತ್ರ ಅಪಾಯದ ಅರಿವಿದ್ದರೂ ಮೌನವಹಿಸಿದೆ. ಕಳೆದ ಒಂದು ವಾರದಿಂದ ಈ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಸರಕಾರಿ ಬಸ್‍ಗಳು ಸಂಚಾರ ಆರಂಭಿಸಿದ್ದು, ರಸ್ತೆ ಬದಿಯ ಈ ಅಪಾಯಕಾರಿ ಮರ ಬಸ್ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಈ ಅಪಾಯಕಾರಿ ಮರವನ್ನು ತೆರವುಗೊಳಿಸುವದಲ್ಲದೆ ಬೇರೆ ಕಡೆಗಳಲ್ಲಿ ಕೂಡ ರಸ್ತೆ ಬದಿಯಲ್ಲಿ ಉರುಳಿದ ಇತರ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. - ಹೊದ್ದೆಟ್ಟಿ ಸುಧೀರ್