ಗೋಣಿಕೊಪ್ಪಲು: ಕಳೆದ ಬಾರಿಯ ಭಾರೀ ಮಳೆಗೆ ಸಿಲುಕಿ ಮನೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಕಾಲೂರು, ಕಿಕ್ಕರಳ್ಳಿ, ಮಾದಾಪುರ, ಸೂರ್ಲಬ್ಬಿ, ಮಂಕ್ಯ, ಶಿರಂಗಳ್ಳಿಯ ಎರಡು ವಿದ್ಯಾರ್ಥಿಗಳು ಸೇರಿದಂತೆ 21 ಕುಟುಂಬಗಳಿಗೆ ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಹಣವನ್ನು ಸಂಗ್ರಹಿಸಿ ರೂ. 3 ಲಕ್ಷದ 50 ಸಾವಿರ ವಿತರಿಸಿದರು.
ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬ್ಯಾಂಕ್ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ಶಿರಂಗಳ್ಳಿ ಉಡುವೇರ ಲೋಕೇಶ್, ಮೇದುರ ಮಾದಪ್ಪ, ಕಾಲೂರಿನ ಚೆನ್ನಪಂಡ ಕೆ. ಪೊನ್ನಪ್ಪ, ತಂಬುಕುತ್ತೀರ ಬಿ. ಅಯ್ಯಣ್ಣ, ಚೆಂಡಿರ ಹರೀಶ್, ತಂಬುಕುತ್ತಿರ ಜಯ ಪೂವಣ್ಣ, ಚನ್ನಪಂಡ ದೊಡ್ಡಯ್ಯ, ಚೆಂಡಿರ ತಿಮ್ಮಯ್ಯ, ಮಾದಾಪುರದ ಮೇದುರ ಕಾಂತಿ ಕುಶಾಲಪ್ಪ, ಸೂರ್ಲಬ್ಬಿಯ ಪಾಸುರ ಕಾಳಮ್ಮ, ತಂಬುಕುತ್ತಿರ ಬಿದ್ದಪ್ಪ, ಮಕ್ಕಂದೂರಿನ ಕಾಳಚಂಡ ಸಿ. ಕಾಳಪ್ಪ, ಪೊನ್ನಚೆಟ್ಟೀರ ಮಾಚವ್ವ, ಮಾದಾಪುರದ ಜಗ್ಗಾರಂಡ ಕಾವೇರಮ್ಮ, ಜಗ್ಗಾರಂಡ ದೇವಯ್ಯ, ಮುಕ್ಕಾಟಿರ ತಾರಾ, ಮಂಕ್ಯದ ಚಾಮೇರ ಸದಾ, ಗೋಣಿಕೊಪ್ಪಲುವಿನ ಕಾವೇರಿ ಕಾಲೇಜುವಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ವಿದ್ಯಾರ್ಥಿಗಳಾದ ಕಾಲೂರಿನ ಕೆ.ಡಿ. ಚಂದ್ರಿಕಾ, ಮಾದಾಪುರದ ಯು.ಕೆ. ಐಶ್ವರ್ಯ ಇವರುಗಳಿಗೆ ಸಹಾಯ ಧನ ವಿತರಿಸಲಾಯಿತು.
ಬ್ಯಾಂಕ್ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಕಬ್ಬಚ್ಚೀರ ಎಂ. ಸುಬ್ರಮಣಿ, ನಿರ್ದೇಶಕರಾದ ಬೆಲ್ಲತಂಡ ಸಿ. ಮಾದಯ್ಯ, ಕಾಡ್ಯಮಾಡ ಪಿ. ದೇವಯ್ಯ, ಮೇದಪಂಡ ಬಿ. ಕಿರಣ್, ಕೊಕ್ಕಲೆಮಾಡ ಎಂ. ಪಾರ್ವತಿ, ಜಮ್ಮಡ ಎಸ್. ಸೌಮ್ಯ, ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಸಿಬ್ಬಂದಿ ಹಾಜರಿದ್ದರು.ಪೊನ್ನಂಪೇಟೆ: ಕಳೆದ ಹಲವು ದಿನಗಳಿಂದ ದಕ್ಷಿಣ ಕೊಡಗಿನ ಹಲವು ಭಾಗಕ್ಕೆ ಭಾರೀ ಮಳೆಯಾಗುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ ಕುಂದ ಗಾ.ಪಂ. ವ್ಯಾಪ್ತಿಯ ಬಸವೇಶ್ವರ ಕಾಲೋನಿಯ ನಿವಾಸಿಗಳಿಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಅಧ್ಯಕ್ಷ ಬೋದ ಸ್ವರೂಪಾನಂದಾಜಿ ನೇತೃತ್ವದಲ್ಲಿ ಅಕ್ಕಿ, ಅಡುಗೆ ಸಾಮಗ್ರಿಗಳು, ಬ್ರೆಡ್, ಬಿಸ್ಕೆಟ್ ಸೇರಿದಂತೆ ಕೆಲವು ಸಾಮಗ್ರಿಗಳನ್ನು ವಿತರಿಸಲಾಯಿತು.