ಒಡೆಯನಪುರ, ಆ. 13: ಶನಿವಾರಸಂತೆ ಚೇಂಬರ್ ಆಫ್ ಕಾಮರ್ಸ್ ಮತ್ತು ವಾಣಿಜೋದ್ಯಮಿಗಳ ಸಹಕಾರ ಸಂಘದ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಪ್ರತಾಪ್ ಅಧ್ಯಕ್ಷತೆಯಲ್ಲಿ ಗುಡುಗಳಲೆ ಆರ್‍ವಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ವರ್ತಕರ ಸಂಘದ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸರ್ದಾರ್ ಆಹಮ್ಮದ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಟಿ.ಎಸ್. ಗಿರೀಶ್, ಕಾರ್ಯದರ್ಶಿಯಾಗಿ ಆರ್.ಕೆ. ನಾರಾಯಣ (ಪುಟ್ಟ) ಹಾಗೂ ಖಜಾಂಚಿಯಾಗಿ ಶ್ರೀನಿವಾಸ್ ಅವರುಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಹಿರಿಯ ಸಲಹೆಗಾರರನ್ನಾಗಿ ಪಟ್ಟಾಭಿರಾಮ್ ಅವರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಬಿ.ಎಸ್. ಪ್ರತಾಪ್, ಸಂತೋಷ್ ಜೈನ್, ಎಸ್.ಎಸ್. ಮಹೇಶ್, ಸಿ.ಜೆ. ಗಿರೀಶ್, ಟಿ.ಎಸ್. ಆನಂದ್, ಎಸ್.ಎಸ್. ದಿವಾಕರ್, ಆರ್.ವಿ. ನವೀನ್, ಗಣೇಶ್, ಹೆಚ್.ಎಸ್. ಕಿರಣ್, ಎನ್.ವಿ. ಹರೀಶ್ ಮತ್ತು ಹೆಚ್.ಟಿ. ಗಣೇಶ್ ಅವರುಗಳನ್ನು ಆಯ್ಕೆ ಮಾಡಲಾಯಿತು.