ಶನಿವಾರಸಂತೆ, ಆ. 12: ಮೈಸೂರಿನಲ್ಲಿ ನಡೆದ ನ್ಯಾಷನಲ್ ಐಕಾನ್ ಮಾಡೆಲ್ ಹಂಟ್ 2ಕೆ-19 ಗ್ರ್ಯಾಂಡ್ ಫಿನಾಲೆ ಸ್ಪರ್ಧೆಯಲ್ಲಿ ಕೊಡ್ಲಿಪೇಟೆಯ ಅವಿನಾಶ್ ಬೌಲಿ ಭಾಗವಹಿಸಿ ಮಿಸ್ಟರ್ ಸೌತ್ ಇಂಡಿಯಾ ರನ್ನರ್ ಅಪ್ 2ಕೆ-19 ಆಗಿ ಹೊರಹೊಮ್ಮಿದ್ದಾರೆ.
ತಿಬ್ಬಾಸ್ ಗ್ರೂಪ್ ಆಯೋಜಿಸಿದ್ದ ಶೋ ಇದಾಗಿತ್ತು. ಅಂತಿಮ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 114 ಮಂದಿ ಭಾಗವಹಿಸಿದ್ದು; ಅವರಲ್ಲಿ ಅವಿನಾಶ್ ಬೌಲಿ ಒಬ್ಬರಾಗಿದ್ದ ತಿಬ್ಬಾಸ್ ಗ್ರೂಪ್ ಫೌಂಡರ್ ಮಾಡೆಲ್ ಡಿಂಪನ್ ಹಾಗೂ ನಟ ಮತ್ತು ಮಾಡೆಲ್ ಡಿ.ಸಿ. ನಾಗೇಶ್ ಜ್ಯೂರಿಗಳಾಗಿದ್ದು; ಪ್ರೊಫೇಶನಲ್ ಮಾಡೆಲ್ ಕಾವ್ಯ ಮತ್ತು ಶ್ವೇತಾ ಶೋ ಸ್ಟಾಪರ್ ಹಾಗೂ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಿದರು.
ವಿಜೇತ ಅವಿನಾಶ್ ಬೌಲಿ ಮಾಡೆಲ್ ಡಿಂಪನ್ ಹಾಗೂ ನಟ ಮತ್ತು ಮಾಡೆಲ್ ಡಿ.ಸಿ. ನಾಗೇಶ್ ಅವರಿಂದ ಪ್ರಶಸ್ತಿ ಪತ್ರ ಮತ್ತು ಟ್ರೋಫಿ ಪಡೆದಿದ್ದಾರೆ. ಈತ ಕೊಡ್ಲಿಪೇಟೆಯ ಚಂದ್ರಶೇಖರ್ - ತ್ರಿವೇಣಿ ದಂಪತಿಯ ಪುತ್ರನಾಗಿದ್ದು, ಕುಶಾಲನಗರದ ಮಹಾತ್ಮ ಗಾಂಧಿ ಮೆಮೊರಿಯಲ್ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಯಾಗಿದ್ದಾನೆ.