ಮಡಿಕೇರಿ, ಆ. 12: ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಆಶ್ರಯದಲ್ಲಿ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ವನ ಮಹೋತ್ಸವ ಜರುಗಿತು. ಕಾಲೇಜಿನ ರೋಟರ್ಯಾಕ್ಟ್ ಸಂಚಾಲಕ ಡಾ. ಶ್ರೀಧರ ಹೆಗ್ಗಡೆ ಮಾತನಾಡಿ, ನೂತನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಮೂಲಕವೇ ಈ ಯೋಜನೆ ಪ್ರಾರಂಭವಾಗಿರುವದು ವಿಶೇಷ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಮಾತನಾಡಿ, ಸಸಿಗಳನ್ನು ನೆಡುವದು ಮಾತ್ರವಲ್ಲ ಅದನ್ನು ಮರವಾಗಿ ಬೆಳೆಸುವಲ್ಲಿನ ಮಹತ್ವದ ಜವಾಬ್ದಾರಿ ಕೂಡ ನಿಮ್ಮದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್ ಸಸಿ ನೆಡುವ ಯೋಜನೆಗೆ ಚಾಲನೆ ನೀಡಿದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಕಾಲೇಜಿನ ಉಪನ್ಯಾಸಕ ರವಿಶಂಕರ್ , ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಶಾಹಿದ್ ಪಾಲ್ಗೊಂಡಿದ್ದರು.
ವನ ಮಹೋತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷದ ಹಲವು ದಿನ ಹಸಿರೀಕರಣ ಯೋಜನೆ ಚಾಲ್ತಿಯಲ್ಲಿ ಇಡುವದಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರೋಟರ್ಯಾಕ್ಟ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು.