ಚೆಟ್ಟಳ್ಳಿ, ಆ. 12: ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ನೆಲ್ಲಿಹುದಿಕೇರಿಯಲ್ಲಿ ಮಳೆಯಬ್ಬರದಿಂದ ನಿರಾಶ್ರಿತರಾದ ಜನರಿಗೆ ಆಶ್ರಯ ನೀಡಲು ಜಿಲ್ಲಾಡಳಿತ ಪರಿಹಾರ ಕೇಂದ್ರವನ್ನು ತೆರೆದಿದೆ. ಈ ಕೇಂದ್ರದಲ್ಲಿ ಆರೋಗ್ಯ ರಕ್ಷಣೆಯ ತುರ್ತು ಸೇವೆ ನೀಡಲಾಗುತ್ತಿದ್ದು, ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಯಶೋಧ, ಆರೋಗ್ಯ ಮೇಲ್ವಿಚಾರಕರು, ದಾದಿ ಯರು ಹಾಗೂ ಆಶಾ ಕಾರ್ಯಕರ್ತೆ ಯರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. - ಕರುಣ್