ವೀರಾಜಪೇಟೆ, ಆ. 12: ನೆಹರೂನಗರದ ಏಳನೇ ವಾರ್ಡ್‍ನ ಎಂ.ಪಿ. ಅಲ್ತಾಫ್ ಅವರ ಮನೆಯ ಹಿಂಭಾಗದಲ್ಲಿ ಭಾರೀ ತಡೆಗೊಡೆ ಜಖಂಗೊಂಡಿದ್ದು, ತಡೆಗೋಡೆ ಮತ್ತೆ ಕುಸಿಯುವ ಭೀತಿಯಲ್ಲಿದ್ದು ಈಗಾಗಲೇ ಮೂರು ಮನೆಗಳು ಜಖಂಗೊಂಡಿವೆ. ಸುಮಾರು 32 ಮನೆಗಳು ಕುಸಿಯುವ ಭೀತಿಯಲ್ಲಿದ್ದು, ಇದರಿಂದ ತಡೆಗೋಡೆಯ ಕೆಳಗಿರುವ ಹರಿಜನ ಕಾಲೋನಿಯು ಜಖಂ ಗೊಂಡು ದುರಂತ ಸಂಭವಿಸುವ ಸಾಧ್ಯತೆ ಇದ್ದು ಸ್ಥಳಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು.
ನೆಹರೂ ನಗರದ ಈ ತಡೆಗೋಡೆ ಅಪಾಂiÀiದ ಅಂಚಿನಲ್ಲಿದ್ದು ತಕ್ಷಣವೇ ಇದನ್ನು ಕೊಳಚೆ ಅಭಿವೃದ್ಧಿ ನಿರ್ಮೂಲನಾ ಮಂಡಳಿಯ ಮೂಲಕ ತುರ್ತು ದುರಸ್ತಿ ಕೈಗೊಂಡು ಪರಿಹಾರ ಒದಗಿಸಲಾಗುವದು. ಆತಂಕ ಬೇಡ. ಕೊಳಚೆ ನಿರ್ಮೂಲನ ಮಂಡಳಿಯಲ್ಲಿ ಹೆಚ್ಚುವರಿ ನಿಧಿ ಇದೆ. ಇದನ್ನು ಬಳಸಿ ನೆಹರೂನಗರದ ತಡೆಗೋಡೆ ಶಾಶ್ವತ ದುರಸ್ತಿಯೊಂದಿಗೆ ಇದರ ಬಳಿಯಿರುವ ಎಲ್ಲ ಕುಟುಂಬಗಳಿಗೆ ಪರಿಹಾರ ಕಲ್ಪಿಸಲಾಗುವದು ಎಂದು ಬೋಪಯ್ಯ ತಿಳಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನಿಯಪಂಡ ಕೆ. ದೇಚಮ್ಮ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಸ್.ಎಚ್. ಮತೀನ್, ಮಹಮ್ಮದ್ ರಾಫಿ, ರುಬೀನಾ, ಮುಖ್ಯಾಧಿಕಾರಿ ಶ್ರೀಧರ್ ಮತ್ತಿತರರು ಹಾಜರಿದ್ದರು.
-ಡಿ.ಎಂ.ಆರ್.