ಅಮ್ಮತ್ತಿ, ಆ. 13: ಕೆನರಾ ಬ್ಯಾಂಕ್ ಅಮ್ಮತ್ತಿ ಶಾಖೆಯ 50ನೇ ವರ್ಷಾಚರಣೆಯನ್ನು ಗ್ರಾಹಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಶಾಖೆಯ ವ್ಯವಸ್ಥಾಪಕ ರಾಹುಲ್ ನಾಥ್, ಮಾಜಿ ಸಿಬ್ಬಂದಿಗಳಾದ ಎಂ.ಬಿ. ಗಣೇಶ್, ಹ್ಯಾರಿ, ಸ್ಟಾನ್ ಡಿ. ಫಿಲಿಪ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

50 ವರ್ಷಗಳಲ್ಲಿ ಜನಸಾಮಾನ್ಯರ ಸಹಕಾರದಿಂದ ಸಾಧನೆಯಲ್ಲಿ ಜಿಲ್ಲೆಗೆ 2ನೇ ಅತ್ಯುತ್ತಮ ಶಾಖೆಯಾಗಿ ಪ್ರಶಸ್ತಿ ಪಡೆದ ಬಗ್ಗೆ ವ್ಯವಸ್ಥಾಪಕ ರಾಹುಲ್ ನಾಥ್ ಸಂತಸ ವ್ಯಕ್ತಪಡಿಸಿದರು.

ಕುಟ್ಟಂಡ ಕೃಷ್ಣ ಮಾತನಾಡಿ, ಜನರ ಸಹಕಾರ ಹಾಗೂ ಸಿಬ್ಬಂದಿಗಳ ಪ್ರಯತ್ನದಿಂದ ಶಾಖೆಯು 50 ವರ್ಷ ಪೂರೈಸಿರುವದು ಮತ್ತು ಸಾಧನೆಯಲ್ಲಿ ಜಿಲ್ಲೆಗೆ 2ನೇ ಸ್ಥಾನ ಪಡೆದಿರುವದು ಹೆಮ್ಮೆಯ ವಿಚಾರ ಎಂದರು.

ಈ ಸಂದರ್ಭ ಶಾಖಾ ಸಿಬ್ಬಂದಿಗಳಾದ ಭಾಸ್ಕರ್, ಮಹೇಶ್, ಸಾಯಿ, ಈಶ್ವರ್, ಶ್ರೀಕಾಂತ್, ಜೋಯಪ್ಪ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.