ಮಡಿಕೇರಿ ಆ. 12: ಮೂರ್ನಾಡು ಗಾಂಧಿನಗರದ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಬಾರ ಮೇಲ್ವಿಚಾರಕಿ ಸವಿತಾ ಕೀರ್ತನ್, ಉತ್ತಮ ಪರಿಸರ, ಕುಟುಂಬ ಸದಸ್ಯರ ಸಹಕಾರದಿಂದ ಆರೋಗ್ಯವಂತ ಮಗುವಿನ ಆಗಮನವಾಗುತ್ತದೆ. ಈ ಶಿಶುವಿನ ಪಾಲನೆಯ ಜವಾಬ್ದಾರಿ ಹೊರುವ ತಾಯಿ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕೆಂದು ಸಲಹೆ ನೀಡಿದರು. ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಸಹಾಯಕಿ ರೀಟಾ ಮಾತನಾಡಿ, ತಾಯಿಯ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವದರಿಂದ ಮಗುವಿನ ಆರೋಗ್ಯ ಉತ್ತಮ ವಾಗಿರುತ್ತದೆ ಎಂದರು. ಕಾರ್ಯಕ್ರಮ ದಲ್ಲಿ ಮಗುವಿಗೆ ಹಾಲುಣಿಸುವ ವಿಧಾನದ ಬಗ್ಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಾದ ಪ್ರಮೀಳಾ, ಕುಸುಮ ಮತ್ತು ಪಿ.ಯು. ಚೈತ್ರ, ಎ.ಎಸ್. ಜ್ಯೋತಿ ಹಾಗೂ ತಾಯಂದಿರು ಮತ್ತು ಮಕ್ಕಳು ಹಾಜರಿದ್ದರು. ಕಾರ್ಯಕರ್ತೆ ಬಿ.ಬಿ. ಜಯಂತಿ ಸ್ವಾಗತಿಸಿ, ವಂದಿಸಿದರು.