ಶ್ರೀಮಂಗಲ, ಆ. 12: ವೀರಾಜಪೇಟೆ ತಾಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿರುವ ಅನಿಲ್ ಮಲೋತ್ರ ಮನೆಗೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಭೇಟಿ ನೀಡಿದರು. ಮಲೋತ್ರ ದಂಪತಿಗಳು ತೆರಾಲು ಗ್ರಾಮದಲ್ಲಿ ಖಾಸಗಿಯಾಗಿ ವನ್ಯಧಾಮ ನಡೆಸುತ್ತಿದ್ದು; ಇದೇ ಸ್ಥಳದಲ್ಲಿ ಸಾಯಿ ಮಂದಿರ ನಿರ್ಮಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ, ಇದರ ನಡುವೆಯೇ ಸ್ವಾಮೀಜಿ ಅವರ ಭೇಟಿ ಕುತೂಹಲ ಮೂಡಿಸಿದೆ.