ಮಡಿಕೇರಿ, ಆ. 13: ಇಲ್ಲಿನ ರೇಸ್ ಕೋರ್ಸ್ ರಸ್ತೆಯ ಎಸ್ಪಿ ಬಂಗಲೆಯ ಹತ್ತಿರ ಇತ್ತೀಚೆಗೆ ಬರೆ ಅಗೆದು ರಸ್ತೆ ಅಗಲೀಕರಣ ಮಾಡಿ, ಖಾಸಗಿ ಬಸ್‍ಗಳು ಈ ರಸ್ತೆಯಲ್ಲಿ ತೆರಳುತ್ತಿವೆ. ಆದರೆ ರಸ್ತೆ ಬದಿಯ ಬರೆಯೊಂದರಲ್ಲಿ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು, ಅನಾಹುತ ಸಂಭವಿಸುವ ಮುನ್ನ ನಗರಸಭೆ ಈ ಮರವನ್ನು ತೆರವುಗೊಳಿಸಬೇಕೆಂಬದು ಸಾರ್ವಜನಿಕರ ಒತ್ತಾಯವಾಗಿದೆ. -ಎಂ.ಕೆ. ಮಂಜುನಾಥ್