ವೀರಾಜಪೇಟೆ, ಆ. 13: ಕಳೆದ 8 ದಿನಗಳಿಂದ ಸುರಿದ ಭಾರೀ ಮಳೆಗೆ ಕೆದಮುಳ್ಳೂರು ಗ್ರಾಮದ ಬಳಿಯ ತರ್ಮೆ ಮೊಟ್ಟೆಯ ವೇದ ಕುಮಾರ್ ಶ್ಯಾಮಲಾ ಅವರ 25 ಹಂದಿ ಮರಿಗಳಿದ್ದ ಗೂಡು ನೀರಿನಲ್ಲಿ ಕೊಚ್ಚಿ ಹೋಗಿದೆ. ಅಲ್ಲಿಯೇ ಇದ್ದ ಗ್ರಾಮದ ಯುವಕರ ತಂಡ ಅದನ್ನು ತಡೆದು ಹಂದಿ ಮರಿಗಳನ್ನು ನೀರಿನಿಂದ ರಕ್ಷಿಸಿ ಒಂದೂವರೆ ಕಿ.ಮೀ. ಅಂತರದಲ್ಲಿರುವ ಕೆದಮುಳ್ಳೂರಿನ ತಂಬಾಂಡ ಇಮ್ಮಿ ಪೊನ್ನಪ್ಪ ಅವರ ಕಟ್ಟಡಕ್ಕೆ ಪ್ರಯಾಸದಿಂದ ನೀರಿನಲ್ಲಿಯೇ ಸಾಗಿಸಿ ಹಂದಿ ಮರಿಗಳ ಜೀವ ರಕ್ಷಣೆ ಮಾಡಿದ್ದಾರೆ.

ಹಂದಿ ಮರಿಗಳನ್ನು ಸುರಕ್ಷಿತವಾಗಿ ಸಾಗಿಸಲು ಗ್ರಾಮದ ಯುವಕರ ತಂಡದ ಚುಮ್ಮಿ, ಗಗನ್, ದೊರೆಪ್ಪ, ಗೋಪಾಲ್, ಸತೀಶ್, ಸುಜು, ದೀಪು, ಪಾಪಣ್ಣ ವಿಶೇಷ ಶ್ರಮ ವಹಿಸಿದ್ದಾರೆ.