ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ಗುಂಡಿ ತೆಗೆಯಲು 8 ಸಾವಿರ ರೂ.ಗಳನ್ನು ಯಾರೋ ಕೇಳಿದರು. ನಮ್ಮಲ್ಲಿ ಹಣ ಇಲ್ಲದ ಕಾರಣ ನಮ್ಮ ಸಂಬಂಧಿಕರೆ ಗುಂಡಿ ತೆಗೆದು ಶವ ಸಂಸ್ಕಾರ ಮಾಡಿದರು ಎಂದು ಪರಮೇಶ್ ಹೇಳಿದರು. ಈ ಬಗ್ಗೆ ಇಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು ಮೃತರ ಸಂಬಂಧಿಕ ಮಹಿಳೆಯರು ತಮ್ಮ ಅಳಲು ತೋಡಿಕೊಂಡ ಕುರಿತು ಬಹಿರಂಗಗೊಂಡಿತು.

ಈಗಾಗಲೇ ಪರಿಹಾರ ಹಾಗೂ ಶವ ಸಂಸ್ಕಾರಕ್ಕೂ ಹಣ ನೀಡಲಾಗಿದೆ. ಹಣ ಕೇಳಿದ ಆರೋಪದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ್ಳುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಶಾಸಕ ಕೆ.ಜಿ. ಬೋಪಯ್ಯ “ಶಕ್ತಿ”ಯೊಂದಿಗೆ ತಿಳಿಸಿದರು. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಕೇಂದ್ರ ಸರಕಾರದಿಂದ ರೂ. 10 ಲಕ್ಷ ಪರಿಹಾರ ನೀಡಲಾಗಿದೆ. ಆರೋಪಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಒಳಿತು ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಹಣ ಕೇಳಿದÀರೆಂದು ಹೇಳಲಾದÀ ಮೂವರ ವಿರುದ್ಧ ಅಧಿಕಾರಿಗಳು ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪ.ಪಂ.ಯ ಆರೋಗ್ಯ ವಿಭಾಗದ ದಫೇದಾರ್ ವೇಲ್ ಮುರುಗ ಅವರು ಇದಕ್ಕೆ ಪ್ರತಿಕ್ರಿಯಿಸಿ ಖಾಸಗಿಯವರಿಗೂ ನಮಗೂ ಯಾವದೇ ಸಂಬಂಧವಿಲ್ಲ ಎಂದು ಹೇಳಿದರು.

ಶವ ಸಂಸ್ಕಾರ ಮಾಡಲು ಹಿಂದೂ ರುದ್ರಭೂಮಿಯಲ್ಲಿ 8 ಸಾವಿರ ರೂ.ಗಳನ್ನು ಕೇಳಿದವರು ನಮ್ಮ ಸಿಬ್ಬಂದಿಗಳಲ್ಲ. ಬೇರೆ ಶವಸಂಸ್ಕಾರ ಮಾಡಲು ಬಂದಂತಹ ಕಿಶನ್, ಮನೋಜ್, ಮಹೇಶ್ ಎಂಬವರು ಪರಮೇಶ್ ಕಡೆಯವರಿಂದ ಹಣ ಕೇಳಿದ್ದಾರೆ. ಅವರ ವಿರುದ್ಧ ಪೊಲೀಸ್ ದೂರು ನೀಡಲಾಗಿದ್ದು ಪೊಲೀಸರು ಅವರುಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದಿದ್ದಾರೆ.