ಶನಿವಾರಸಂತೆ, ಆ. 11: ಶನಿವಾರಸಂತೆಯ ಕಾವೇರಿ ರಸ್ತೆಯಲ್ಲಿ ಕಾಫಿ ತೋಟವೊಂದರ 2 ಮರಗಳು ಗಾಳಿ - ಮಳೆಗೆ ಬೇರು ಸಹಿತ ರಸ್ತೆಗೆ ವಾಲಿಕೊಂಡು ಇಂದಿಗೆ 5 ದಿನಗಳಾಗಿದ್ದು, ಪಾದಚಾರಿಗಳ ಮೇಲೆ ಅಥವಾ ವಾಹನಗಳ ಮೇಲೆ ಬಿದ್ದು ದುರಂತ ನಡೆಯುವ ಸಾಧ್ಯತೆ ಇದೆ. ಸಂಬಂಧಿಸಿದವರು ಗಮನಹರಿಸಿ ಮರ ತೆರವು ಮಾಡಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.