ನಾಪೆÇೀಕ್ಲು, ಆ. 11: ಕಳೆದ ಒಂದು ವಾರದಿಂದ ಭಾರೀ ಗಾಳಿ ಮಳೆಯಿಂದ ಕತ್ತಲಾವರಿಸಿದ್ದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಸೂರ್ಯನ ದರ್ಶನವಾಗಿದೆ. ಶನಿವಾರ ಸಂಜೆಯಿಂದಲೇ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ಕಂಡು ಬಂತು. ಅಪರಾಹ್ನದ ನಂತರ ತುಂತುರು ಮಳೆ, ಮೋಡ ಕವಿದ ವಾತಾವರಣ ಇತ್ತು.

ನಾಪೆÇೀಕ್ಲು-ಮಡಿಕೇರಿ ಮುಖ್ಯರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ನದಿ ಪ್ರವಾಹ ಹಾಗೂ ನಾಪೆÇೀಕ್ಲು-ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಪ್ರವಾಹ ಹೊರತುಪಡಿಸಿ ಇನ್ನುಳಿದ ಎಲ್ಲಾ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದವು. ಇದೇ ವಾತಾವರಣ ಮುಂದುವರಿದಲ್ಲಿ ಸೋಮವಾರ ಬೆಳಿಗ್ಗೆಯಿಂದ ನಾಪೆÇೀಕ್ಲು-ಮಡಿಕೇರಿ ರಸ್ತೆ ಸಂಚಾರ ಸುಗಮವಾಗಲಿದೆ. ನಾಪೆÇೀಕ್ಲು-ವೀರಾಜಪೇಟೆಗೆ ಖಾಸಗಿ ಬಸ್‍ನ ಓಡಾಟ ಕಂಡು ಬಂತು. ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪರಿಹಾರ ಕೇಂದ್ರದಲ್ಲಿ 86 ಜನ ತಂಗಿದ್ದಾರೆ.

ಬಿಸಿಲಿನ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಇಂದು (ಸೋಮವಾರ) ಆಚರಿಸುತ್ತಿರುವ ಬಕ್ರೀದ್ ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಪಟ್ಟಣದಲ್ಲಿ ಓಡಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂತು.

ಬರೆ ಕುಸಿತ: ಅಲ್ಲಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ನದಿ ಪ್ರವಾಹ ಸಂಪೂರ್ಣವಾಗಿ ಇಳಿಮುಖಗೊಂಡ ನಂತರ ಮಾತ್ರ ಕಷ್ಟ-ನಷ್ಟಗಳ ಬಗ್ಗೆ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.

ಕತ್ತಲೆಯಲ್ಲಿ ನಾಪೆÇೀಕ್ಲು: ಕಳೆದ 5 ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿಕೊಂಡಿದೆ. ಮರದ ಕೊಂಬೆ ಬಿದ್ದು, ವಿದ್ಯುತ್ ಕಂಬಗಳು, ತಂತಿಗಳು ರಸ್ತೆಯಲ್ಲಿ ಬಿದ್ದಿರುವದು ಕಂಡುಬರುತ್ತಿದೆ. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಮೊಬೈಲ್, ಟಿ.ವಿ.ಗಳನ್ನು ಬಳಸಲು ಸಾಧ್ಯವಾಗದೆÀ ಈ ವ್ಯಾಪ್ತಿಯ ಜನರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾಹಿತಿ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

-ಪಿ.ವಿ. ಪ್ರಭಾಕರ್