ಚೆಟ್ಟಳ್ಳಿ, ಆ. 11: ಶಿವಮೊಗ್ಗ ಜಿಲ್ಲೆಯ ಐಕೋನಿವೋ ಟೈರಂಡ್ಸ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿ ವತಿಯಿಂದ ಅತ್ಯುತ್ತಮ ಸಾಧನೆಗೆ ನೀಡುವ “ಪ್ಲಾಟಿನಂ ಸ್ಟಾರ್” ಅವಾರ್ಡ್‍ಗೆ ಕೊಡಗಿನ ಸುಂಟಿಕೊಪ್ಪ ನಿವಾಸಿ ಕೆ.ಎ. ರಾಜಿಕ್ ಹಾಗೂ ಕುಟ್ಟ ನಿವಾಸಿ ಎಂ.ಇ. ಸಲ್ಮಾನ್ ಭಾಜನರಾಗಿದ್ದಾರೆ.

ಜಿಲ್ಲೆಯಿಂದ ಮೊದಲ “ಪ್ಲಾಟಿನಂ ಅವಾರ್ಡ್’’ ಪಡೆದ ಸುಂಟಿಕೊಪ್ಪ ನಿವಾಸಿ ಕೆ.ಎ. ರಾಜಿಕ್ ಅವರು ಕೊಡಗು ಜಿಲ್ಲಾ ಎಸ್.ಎಸ್.ಎಫ್. ಕೌನ್ಸಿಲರ್ ಹಾಗೂ ರಾಜ್ಯ ಎನ್.ಎಸ್.ಯು.ಐ. ಇದರ ರಾಜ್ಯ ಘಟಕದ ಕೌನ್ಸಿಲರ್ ಆಗಿದ್ದಾರೆ. ಕುಟ್ಟ ನಿವಾಸಿ ಸಲ್ಮಾನ್ ಎಂ.ಇ. ಅವರು ಜಿಲ್ಲೆಯಿಂದ ಎರಡನೇ ಪ್ಲಾಟಿನಂ ಅವಾರ್ಡ್ ಪಡೆದ ವ್ಯಕ್ತಿಯಾಗಿದ್ದಾರೆ.