ಸಿದ್ದಾಪುರ, ಆ. 11: ಬರಿಗೈನಲ್ಲೆ 20ಕ್ಕೂ ಅಧಿಕ ಹಾವನ್ನು ಹಿಡಿಯುತ್ತಿದ್ದ ಕುಶಾಲನಗರದ ಬಾರ್ ನೌಕರ ಕೊರಕುಟ್ಟಿರ ರತನ್ ಅವರಿಗೆ ಮಡಿಕೇರಿಯ ಕರ್ನಲ್ ಅಯ್ಯಪ್ಪ ಹಾವು ಹಿಡಿಯುವ ಸ್ಟಿಕ್ನ್ನು ನೀಡಿದ್ದು, ಬರಿಗೈನಲ್ಲಿ ಹಾವು ಹಿಡಿಯುತ್ತಿದ್ದ ರತನ್ ಇನ್ನು ಮುಂದೆ ಸ್ಟಿಕ್ನಲ್ಲಿ ಹಾವು ಹಿಡಿಯಲಿದ್ದಾರೆ.
ರತನ್ ಬರಿಗೈಲಿ ಹಾವು ಹಿಡಿಯುತ್ತಿದ್ದ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿತ್ತು. ಪತ್ರಿಕೆ ವರದಿಯನ್ನು ಗಮನಿಸಿದ ಮಡಿಕೇರಿ ಆರ್ಮಿ ಆಸ್ಪತ್ರೆಯ ವೈದ್ಯ ಕರ್ನಲ್ ಅಯ್ಯಪ್ಪ ಹಾಗೂ ಸ್ನೇಹಿತರು ಸಹಾಯ ನೀಡಿದ್ದಾರೆ.