ಕೂಡಿಗೆ, ಆ. 11: ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ನಾಯಕತ್ವ ಗುಣ, ಸಾಮಾಜಿಕ ಕಾಳಜಿ, ಸಹಬಾಳ್ವೆ, ಸಹೋದರತ್ವ, ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಪಿ. ಸುಬ್ರಮಣ್ಯ ಯಡಪಡಿತಾಯ ಕರೆ ನೀಡಿದರು.
ಮಂಗಳೂರು ವಿಶ್ವವಿದ್ಯಾ ನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರದ ಮಾನವಿಕ ಸಭಾಂಗಣ ದಲ್ಲಿ ಜರುಗಿದ ರಾಷ್ಟಿಯ ಸೇವಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಗಿಡಕ್ಕೆ ನೀರೆರೆಯುವದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಎಂಬದು ಸಮುದಾಯದ ನಡುವೆ ಕಲಿಯುವ ಅನುಭದ ಶಿಕ್ಷಣವಿದ್ದಂತೆ. ವಿದ್ಯಾರ್ಥಿಗಳು ಎನ್ಎಸ್ಎಸ್ನಲ್ಲಿ ತೊಡಗಿಕೊಳ್ಳು ವದರಿಂದ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಜೊತೆಗೆ ಜೀವನದಲ್ಲಿ ಶಿಸ್ತು ಮತ್ತು ಸಾಮಾಜಿಕ ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಚಂದ್ರಶೇಖರ ಜಿ. ಜೋಷಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಎನ್ಎಸ್ಎಸ್ ಎಂಬದು ವಿದ್ಯಾರ್ಥಿ ಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಯನ್ನು ಬೆಳೆಸುತ್ತದೆ ಎಂದರು. ಈ ಸಂದರ್ಭ ಪ್ರಭಾರ ನಿರ್ದೇಶಕಿ ಪೆÇ್ರ. ಮಂಜುಳಾ ಶಾಂತರಾಮ್, ಹಿರಿಯ ಪ್ರಾಧ್ಯಾಪಕ ಪೆÇ್ರ. ಎಂ. ಜಯಶಂಕರ್, ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಸಂಯೋಜಕಿ ಡಾ. ಐ.ಕೆ. ಮಂಜುಳಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಡಾ. ಕೆ.ಎಸ್. ಚಂದ್ರಶೇಖರಯ್ಯ, ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಟಿ. ಕೇಶವಮೂರ್ತಿ, ಎಸ್ಸಿ-ಎಸ್ಟಿ ಸೆಲ್ನ ಸಂಯೋಜಕ ಡಾ. ರಾಜಕುಮಾರ್ ಎಸ್. ಮೇಟಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಕೆ.ಕೆ. ಧರ್ಮಪ್ಪ, ಸಹಾಯಕ ಪ್ರಾಧ್ಯಾಪಕರು ಗಳಾದ ಡಾ. ಸ್ನೇಹಾ ರಾಣಿ, ಡಾ. ಗುಣಶ್ರಿ, ಬಿ.ಎಸ್. ಶ್ರೀನಾಥ್, ಹಂಗಾಮಿ ಪ್ರಾಧ್ಯಾಪಕ ಲೋಕನಾಥ್ ರೈ, ಆಡಳಿತ ಮತ್ತು ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅನ್ನಪೂರ್ಣ ಪ್ರಾರ್ಥಿಸಿ, ಉಪನ್ಯಾಸಕ ಜಮೀರ್ ಅಹಮದ್ ನಿರೂಪಿಸಿದರು.