ಭಾಗಮಂಡಲ, ಆ. 11: ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತದಿಂದ ಸದಸ್ಯ ರೈತರಿಗೆ ಕರಿಕೆಯಲ್ಲಿ ಬೆಳೆಗಳ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಎಸ್‍ಎಲ್‍ಎನ್ ಗ್ಲೋಬಲ್ ಅಗ್ರಿಸೊಲ್ಯೂಷನ್ಸ್ ಹಾಗೂ ಫ್ಯೂಚರ್ ಬಯೋಟೆಕ್ ಕೃಷಿ ವಿಶ್ವವಿದ್ಯಾನಿಯಲ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕರಿಕೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ 150 ಮಂದಿ ಸದಸ್ಯ ರೈತರು ಪಾಲ್ಗೊಂಡಿದ್ದರು. ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಸ್. ಬಿನ್ನಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪೆನಿಯ ಅಧ್ಯಕ್ಷ ಕೋಡಿ ಕೆ. ಪೊನ್ನಪ್ಪ ವಹಿಸಿದ್ದರು. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಪ್ರಾರಂಭವಾದ ಈ ಕಂಪೆನಿಯು ರೈತರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ರೈತರು ಕಂಪೆನಿಯಲ್ಲಿ ದೊರೆಯುವ ಸೌಲಭ್ಯಗಳನ್ನು ಕಾಲಕಾಲಕ್ಕೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳುವದು ಸದಸ್ಯ ರೈತರ ಕರ್ತವ್ಯ. ಕಂಪೆನಿಯಲ್ಲಿ ರೈತ ಮಿತ್ರರಿಗೆ ಲಭ್ಯವಿರುವ ಯಂತ್ರೋಪಕರಣಗಳು, ಸಾವಯವ ಗೊಬ್ಬರ, ಕೃಷಿಗೆ ಪೂರಕವಾದ ಸಲಕರಣೆ ಔಷಧಿ, ಇತ್ಯಾದಿಗಳ ವಿವರ ನೀಡಿದರು. ಉತ್ಪನ್ನಗಳಾದ ಜೇನು, ತೆಂಗಿನೆಣ್ಣೆ, ಕಾಳುಮೆಣಸು, ಏಲಕ್ಕಿ, ಕಾಫಿಗಳಿಂದ ಕಂಪೆನಿಗೆ ಮೌಲ್ಯವರ್ಧನೆಗಾಗಿ ಪ್ರಥಮ ಪ್ರಶಸ್ತಿ ಲಭಿಸಿದೆ ಎಂದರು. ಎಸ್‍ಎಲ್‍ಎನ್ ಗ್ಲೋಬಲ್ ಅಗ್ರಿ ಸೊಲ್ಯೂಷನ್‍ನ ಸಂಪನ್ಮೂಲ ವ್ಯಕ್ತಿ ವಿಷ್ಣುಮೂರ್ತಿ ಜಿ. ರಾವ್ ಬೆಳೆಗಳ ಸಮಗ್ರ ಪೊಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಬೇಕಲ್ ಸಿ ಜಯರಾಮಗೌಡ, ಕೆ. ವೇಣುಗೋಪಾಲ ನಂಬಿಯಾರ್, ಕೆ. ರಾಜೇಂದ್ರ, ಕೇರಳದ ಮೈಕೆಲ್ ಪೂವತ್ತಾಣಿ, ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ನಿರ್ದೇಶಕರಾದ ಹರ್ಷ ಡಿ.ಎನ್. ವಿಠಲ ಪಿ.ಸಿ., ದೇವರಾಜ್ ಬಿ.ಡಿ., ಪುಷ್ಪ ಬಿ.ಟಿ. ಉಪಸ್ಥಿತರಿದ್ದರು. ಕಂಪೆನಿಯ ನಿರ್ದೇಶಕ ಬೇಕಲ್ ಡಿ. ದೇವರಾಜ್ ವಂದಿಸಿದರು.

ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಭಾಗಮಂಡಲದ ಸದಸ್ಯ ರೈತರಿಗೆ ಕರಿಕೆಯಲ್ಲಿ ಬೆಳೆಗಳ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕರಿಕೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ 150 ಮಂದಿ ಸದಸ್ಯ ರೈತರು ಪಾಲ್ಗೊಂಡಿದ್ದರು.