ಸೋಮವಾರಪೇಟೆ, ಆ. 11: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ, ಕಿರಗಂದೂರು ಪ್ರಕೃತಿ ಯುವತಿ ಮಂಡಳಿ, ಹಾನಗಲ್ಲು ಶೆಟ್ಟಳ್ಳಿ ಸರಸ್ವತಿ ಯುವತಿ ಮಂಡಳಿ ಇವರುಗಳ ಆಶ್ರಯದಲ್ಲಿ, ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸೂಜಿ ನೂಲು ಓಟದಲ್ಲಿ ಕೃತಿಕ ಪ್ರಥಮ, ರಕ್ಷಾ ದ್ವಿತೀಯ ಹಾಗೂ ಅನುಷ ತೃತೀಯ ಸ್ಥಾನಗಳಿಸಿದರು. ನಿಂಬೆ ಹಣ್ಣು ಚಮಚ ಓಟದಲ್ಲಿ ನಿತ್ಯ (ಪ್ರ), ಶೋಭಾ (ದ್ವಿ), ರಂಜಿತ (ತೃ) ಸ್ಥಾನಗಳಿಸಿದರು.

ಬಾಂಬ್ ಇನ್ ದ ಸಿಟಿಯಲ್ಲಿ ಲತಾ (ಪ್ರ), ಶೈಲಾ (ದ್ವಿ) ಹಾಗೂ ರಂಜಿತ (ತೃ) ಸ್ಥಾನಗಳಿಸಿದರು. ನದಿ ದಡ ಸ್ಪರ್ಧೆಯಲ್ಲಿ ಪೃಥ್ವಿ (ಪ್ರ), ರಕ್ಷ (ದ್ವಿ) ಮತ್ತು ರಚನ (ತೃ) ಸ್ಥಾನಗಳಿಸಿದರು. ಗೋಣಿ ಚೀಲದ ಓಟ ಸ್ಪರ್ಧೆಯಲ್ಲಿ ಲತಾ (ಪ್ರ), ಯಶಸ್ವಿ (ದ್ವಿ) ಮತ್ತು ಅನಿತಾ (ತೃ) ಸ್ಥಾನಗಳಿಸಿದರು.

ಯುವಕರಿಗೆ ನಡೆದ ಕಪ್ಪೆ ಓಟದಲ್ಲಿ ಕಿರಣ್ (ಪ್ರ), ಮೋಹನ್ (ದ್ವಿ) ಮತ್ತು ವಿಶ್ವ (ತೃ) ಸ್ಥಾನಗಳಿಸಿದರು. ಗೋಲಿ ಆಟದಲ್ಲಿ ಧರ್ಮಪ್ಪ (ಪ್ರ), ಕೆ.ಪಿ. ಪಾಪಣ್ಣ (ದ್ವಿ) ಹಾಗೂ ಸತೀಶ್ (ತೃ) ಸ್ಥಾನಗಳಿಸಿದರು. ಕಣ್ಣು ಮುಚ್ಚಿ ಮಡಕೆ ಒಡೆಯುವ ಸ್ಫರ್ಧೆಯಲ್ಲಿ ನವೀನ್ (ಪ್ರ), ವಿಶ್ವ (ದ್ವಿ) ಹಾಗೂ ನಿಶಾಂತ್ (ತೃ) ಸ್ಥಾನಗಳಿಸಿದರು. ಹಿಂದಕ್ಕೆ ನಡೆಯುವ ಸ್ಪರ್ಧೆಯಲ್ಲಿ ಮೇಘನ (ಪ್ರ), ಕಿರಣ್ (ದ್ವಿ) ಹಾಗೂ ವಿಶ್ವ (ತೃ) ಸ್ಥಾನಗಳಿಸಿದರು. ಗೋಣಿ ಚೀಲದ ಓಟ ಸ್ಪರ್ಧೆಯಲ್ಲಿ ವಿಶ್ವ (ಪ್ರ), ಪ್ರಶಾಂತ್ (ದ್ವಿ) ಹಾಗೂ ಅನಿತಾ (ತೃ) ಸ್ಥಾನಗಳಿಸಿದರು.

ಸಾರ್ವಜನಿಕರಿಗೆ ನಡೆದ ಸ್ಪರ್ಧೆಯಲ್ಲಿ ಹೇಮಾ ಕೃಷ್ಣಪ್ಪ (ಪ್ರ), ಕಾವೇರಿ (ದ್ವಿ) ಹಾಗೂ ಆದರ್ಶ್ (ತೃ) ಸ್ಥಾನಗಳಿಸಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಾಜಿ ಅಧ್ಯಕ್ಷ ಎಂ.ಡಿ. ಹರೀಶ್, ತಾಲೂಕು ಘಟಕದ ಅಧ್ಯಕ್ಷೆ ಕೆ.ಆರ್. ಚಂದ್ರಿಕಾ, ಸರಸ್ವತಿ ಯುವತಿ ಮಂಡಳಿ ಅಧ್ಯಕ್ಷೆ ಡಿ.ಆರ್. ಚಂದ್ರಾವತಿ, ಒಕ್ಕೂಟದ ಸಲಹೆಗಾರ ಎ.ಆರ್. ಕುಶಾಲಪ್ಪ, ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಸುನೀಲ್, ಗ್ರಂಥಪಾಲಕ ಧರ್ಮಪ್ಪ ಇದ್ದರು.