ಮಡಿಕೇರಿ, ಆ. 11: ಇಲ್ಲಿನ ನಗರಸಭೆ ಮುಂಭಾಗದಲ್ಲಿ ಉಡುಪಿ ಗಾರ್ಡನ್ ಹೊಟೇಲ್ ಎದುರು ತಡೆಗೋಡೆ ಕುಸಿದಿದೆ. ಪರಿಣಾಮ ಕೆಳಗಡೆ ಸತೀಶ್ ಎಂಬವರು ವಾಸವಿರುವ ಮನೆ ಮೇಲ್ಚಾವಣಿ ಸಹಿತ ಗೋಡೆಗಳಿಗೆ ಹಾನಿಯುಂಟಾಗಿದೆ.
ಕಳೆದ ಶುಕ್ರವಾರ ತಡರಾತ್ರಿ ಸಂಭವಿಸಿರುವ ಈ ತಡೆಗೋಡೆ ಕುಸಿತದಿಂದ ಸತೀಶ್ ಹಾಗೂ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ಹೊಟೇಲ್ ಹಾಗೂ ಮನೆಗೆ ಸಾಕಷ್ಟು ನಷ್ಟ ಉಂಟಾಗಿರುವ ದಾಗಿ ಮಾಹಿತಿ ಲಭಿಸಿದೆ.