ಸೋಮವಾರಪೇಟೆ, ಆ. 11: ತಾಲೂಕಿನ ಗರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು ಹೊಳೆಯಲ್ಲಿ ಜಾನುವಾರಿನ ಕಳೇಬರ ಪತ್ತೆಯಾಗಿದೆ. ಕಿರುದಾಲೆ ಗ್ರಾಮದ ಮಾದಪ್ಪರವರ 5 ವರ್ಷ ಪ್ರಾಯದ ಗಬ್ಬದ ಹಸು ಮೇವು ಹುಡುಕುವ ಸಂದರ್ಭ ಹೊಳೆಗೆ ಸಿಲುಕಿದ್ದು, ಸುಮಾರು 15 ಕಿ.ಮೀ. ದೂರದಷ್ಟು ಹೊಳೆಯಲ್ಲಿ ತೇಲಿ ಬಂದಿರುವ ಹಸುವಿನ ಕಳೇಬರ ಹರದೂರು ಸೇತುವೆಯಲ್ಲಿ ಸಿಲುಕಿದ್ದು, ಸ್ಥಳೀಯರು ಅದನ್ನು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪಶು ವೈದ್ಯಾಧಿಕಾರಿ ಡಿ.ಶಿವು ಬಾದಾಮಿ, ಸೇರಿದಂತೆ ಸಿಬ್ಬಂದಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.