ಕೆಜಿಬಿ ಹಾಗೂ ಬೆಂಬಲಿಗರ ಪರದಾಟ
ಮಡಿಕೇರಿ, ಆ. 11: ತೋರ ಗ್ರಾಮದಲ್ಲಿ ಕಣ್ಮರೆಯಾದವರ ಹುಡುಕಾಟದ ಕಾರ್ಯಾಚರಣೆಗೆ ಜೆಸಿಬಿಗೆ ಡೀಸಲ್ ತಲಪಿಸಲು ತೆರಳಿದ್ದ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಹರೀಶ್ ಹಾಗೂ ಇತರರಿದ್ದ ಜೀಪು ಕೆಸರಿನಲ್ಲಿ ಸಿಲುಕಿಕೊಂಡ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ಕೆಜಿಬಿ ಹಾಗೂ ಬೆಂಬಲಿಗರು ಕುಗ್ರಾಮದಲ್ಲಿ ಪರದಾಡಿದ ಘಟನೆ ನಡೆದಿದೆ. ಬಳಿಕ ಜೆಸಿಬಿ ಮೂಲಕ ಜೀಪನ್ನು ಎಳೆದು ರಸ್ತೆಯನ್ನು ಸರಿಪಡಿಸಲಾಯಿತು.