ಕರಿಕೆ, ಆ. 11: ಚೇರಂಬಾಣೆ ಸಮೀಪದ ಕೊಳಗದಾಳು ಗ್ರಾಮದಲ್ಲಿ ಮನೆ ಬಳಿ ಗುಡ್ಡ ಕುಸಿದು ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ನಿವಾಸಿ ಬಾಚರಣಿಯಂಡ ಲವ ಎಂಬವರ ಮನೆ ಸಮೀಪದಲ್ಲಿ ಕಳೆದ ರಾತ್ರಿ ಸುಮಾರು ನೂರು ಅಡಿ ಎತ್ತರ ಗುಡ್ಡ ಕುಸಿದು ಮನೆ ಸುತ್ತಲೂ ಬಿರುಕು ಕಾಣಿಸಿಕೊಂಡಿದ್ದು, ಮನೆ ಕುಸಿದು ಬೀಳುವ ಸಾಧ್ಯತೆ ಇದೆ. ಮನೆ ಬಳಿಯಿರುವ ಮೂರು ನಾಲ್ಕು ಎಕರೆ ಕಾಫಿತೋಟ ಮಣ್ಣಿನಿಂದ ಕೊಚ್ಚಿಹೋಗಿದ್ದು, ಮನೆಯಲ್ಲಿದ್ದ ಲವ ಮತ್ತು ಅವರ ಮಗ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು ಮತ್ತೊಬ್ಬ ಮಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.