ಶನಿವಾರಸಂತೆ, ಆ. 11: ಮಹಾ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರ ಸೇವೆಗೆ ಕೊಡ್ಲಿಪೇಟೆಯ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ವತಿಯಿಂದ ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಕರ್ತರು ಸಂತ್ರಸ್ತರ ರಕ್ಷಣೆ ಹಾಗೂ ಮನೆ ಸಾಮಗ್ರಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕುಶಾಲನಗರದಲ್ಲಿ 15ಕ್ಕೂ ಅಧಿಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಕಳೆದ 3 ದಿನಗಳಿಂದ ಸಂತ್ರಸ್ತರ ರಕ್ಷಣೆಗೆ ಎಸ್‍ಕೆಎಸ್‍ಎಸ್‍ಎಫ್‍ನ ವಿಖಾಯ ತಂಡ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ಕೊಡ್ಲಿಪೇಟೆಯ ವಲಯ ಜಿಲ್ಲಾ ಸಂಘಟನಾಕಾರ ವಿ.ಎಂ. ನೌಫಲ್, ವಲಯ ಮಟ್ಟದ ಅಧ್ಯಕ್ಷ ಭಾಸಿತ್ ಹಾಜಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ವಿಖಾಯ ಸಲಹೆಗಾರ ಭಾತಿಶ್ ಶಂಶಿ ಇತರರು ನೇತೃತ್ವ ವಹಿಸಿದ್ದಾರೆ. - ನರೇಶ್