ಕರಿಕೆ, ಆ. 11: ಇಲ್ಲಿನ ಚೆತ್ತುಕಾಯ ಪಚ್ಚೆಪಿಲಾವು ಅಂಗನವಾಡಿ ಕೇಂದ್ರ ಸಮೀಪದಲ್ಲಿ ರಸ್ತೆ ಬದಿಗೆ ಗುಡ್ಡ ಕುಸಿದು ವಿದ್ಯುತ್ ಲೈನ್ ರಸ್ತೆಗೆ ಬಿದ್ದು ಅಪಾಯಕಾರಿ ಸನ್ನಿವೇಶ ಉಂಟಾಗಿತ್ತು. ಈ ಬಗ್ಗೆ ಲೈನ್ ಮೇನ್ ಗಮನಕ್ಕೆ ತಂದಾಗ ಸೂಕ್ತವಾಗಿ ಸ್ಪಂದಿಸಲಿಲ್ಲವೆಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. -ಸುಧಿರ್