ಕಣಿವೆ, ಆ. 11: ಇಡೀ ಊರೆ ನೀರಿ ನಿಂದ ಆವೃತ ವಾಗಿದ್ದರೂ ಕೂಡ ಈ ಊರಿನ ಜನ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಎರಡು ಕಿ.ಮೀ. ದೂರದ ಕಣಿವೆ ಗ್ರಾಮದ ಕೊಳವೆ ಬಾವಿಯೊಂದರಿಂದ ನೀರು ತೆಗೆದು ಮನೆಗೆ ಹೊತ್ತೊಯ್ಯುವ ಚಿತ್ರಣ ಭುವನಗಿರಿ ಗ್ರಾಮದಲ್ಲಿ ಕಂಡುಬಂದಿದೆ.
ಕಾವೇರಿ ಹಾಗೂ ಹಾರಂಗಿ ನದಿಗಳು ಆರ್ಭಟಿಸಿ ಇಡೀ ಊರನ್ನು ಅಪೋಷಣಗೈದು ಹರಿಯುತ್ತಿದ್ದರೂ ಕೂಡ ಕುಡಿಯುವ ನೀರಿಲ್ಲದೇ ಪರದಾಡುವ ಸ್ಥಿತಿ ಇಲ್ಲಿನ ಜನರದ್ದು. ವಿದ್ಯುತ್ ಕಳೆದ ನಾಲ್ಕು ದಿನಗಳಿಂದ ಕೈಕೊಟ್ಟ ಕಾರಣ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಮಹಿಳೆಯರು ದೂರಿದ್ದಾರೆ. -ಮೂರ್ತಿ, ಕುಶಾಲನಗರ