ವೀರಾಜಪೇಟೆ, ಆ. 10: ವೀರಾಜಪೇಟೆಯ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ವತಿಯಿಂದ ವಿಶ್ವ ಕೌಶಲ್ಯ ದಿನಾಚರಣೆಯ ಅಂಗವಾಗಿ ಕೌಶಲ್ಯ ಜಾಥಾವನ್ನು ಆಯೋಜಿಸಲಾಗಿತ್ತು.
ಕೇಂದ್ರದ ವ್ಯವಸ್ಥಾಪಕ ಹೆಚ್.ಎಂ. ದಿವಾಕರ್ ನೇತೃತ್ವದಲ್ಲಿ ನಡೆದ ಜಾಥಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಕೌಶಲ್ಯ ಕೇಂದ್ರದ ತರಬೇತುದಾರರು, ಸಿಬ್ಬಂದಿ ಭಾಗವಹಿಸಿದ್ದರು.