ಶನಿವಾರಸಂತೆ, ಆ. 10: ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಿ ಒಕ್ಕೂಟದ ಸದಸ್ಯರು ಶ್ರೀ ಚಾಮುಂಡೇಶ್ವರಿ ಬನದ ಆವರಣದಲ್ಲಿ ಶ್ರಮದಾನ ಮಾಡಿದರು.
ಯೋಜನೆಯ ಆದೇಶದನ್ವಯ ಒಕ್ಕೂಟದ 15 ಸದಸ್ಯರು ವಲಯ ಮೇಲ್ವಿಚಾರಕ ರಮೇಶ್ ಅವರ ಮಾರ್ಗದರ್ಶನದಲ್ಲಿ ಕೋಟಿಪೂಜಾರಿ ಮತ್ತು ಗಂಗಪ್ಪ ಕರ್ಕೇರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ಚಾಮುಂಡೇಶ್ವರಿ ಬನದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಒಕ್ಕೂಟದ ಸೇವಾ ಪ್ರತಿನಿಧಿ ಎಸ್.ಆರ್. ಶೋಭಾ, ಅಧ್ಯಕ್ಷೆ ಶಾಹಿನ್ ತಾಜ್, ಕಾರ್ಯದರ್ಶಿ ಎಸ್.ಪಿ. ದಿವ್ಯಾ, ಸದಸ್ಯರಾದ ಉಷಾ ಜಯೇಶ್, ವಾರಿಜಾ ಸಂಜು, ರಾಣಿ, ನೇತ್ರಾವತಿ, ನಳಿನಿ, ಸುನಿತಾ, ಗಿರಿಜಾ, ಲತಾ, ಭವಾನಿ, ಕೃತಿಕಾ, ಲಕ್ಷ್ಮೀ, ವಾರಿಜಾ ಗೋಪಾಲ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.