ಸಿದ್ದಾಪುರ, ಆ. 10: ಸಿದ್ದಾಪುರದ ಎಂ.ಜಿ. ರಸ್ತೆಯ ನಿವಾಸಿ ಲಕ್ಷ್ಮಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಜಿಲ್ಲಾ ಎಸ್.ಎನ್.ಡಿ.ಪಿ. ವತಿಯಿಂದ ಲಕ್ಷ್ಮಿ ಅವರ ಚಿಕಿತ್ಸೆಗೆ ಸಹಾಯ ಧನ ನೀಡಲಾಯಿತು.
ಎಸ್.ಎನ್.ಡಿ.ಪಿ ಜಿಲ್ಲಾ ಸಂಚಾಲಕ ಕೆ.ಎನ್. ವಾಸು, ಎಸ್.ಎನ್.ಡಿ.ಪಿ. ನಿರ್ದೇಶಕ ಕಿಶೋರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರನ್ ಹಾಜರಿದ್ದರು.