ಮಡಿಕೇರಿ, ಆ. 10: ವೀರಾಜಪೇಟೆಯ ಬಿ.ಸಿ. ಪ್ರೌಢಶಾಲೆ, ದೇವಣಗೇರಿ ಸಭಾಂಗಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ಉಚಿತ ಗುರುತಿನ ಚೀಟಿ, ವೈದ್ಯಕೀಯ ಕಿಟ್ ಹಾಗೂ ಕಲಿಕ ಸಾಮಗ್ರಿಗಳ ವಿತರಣಾ ಸಮಾರಂಭ ಶಾಲಾ ಅಧ್ಯಕ್ಷ ಮುಕ್ಕಾಟಿರ ಐ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಗುರುತಿನ ಚೀಟಿ ಮತ್ತು ಗ್ರಂಥಾಲಯದ ಪುಸ್ತಕಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ನಾಣಯ್ಯ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್‍ನ ಅಧ್ಯಕ್ಷ ಆದಿತ್ಯ ಅವರು ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಿ ಶಾಲೆಗೆ ಮತ್ತಷ್ಟು ವಿದ್ಯಾರ್ಜನೆಗೆ ಅಗತ್ಯವಾದ ಸಲಕರಣೆಗಳನ್ನು ನೀಡುವದಾಗಿ ಭರವಸೆಯಿತ್ತರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ಭರತ್ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೈದ್ಯಕೀಯ ಕಿಟ್‍ನ್ನು ಉಚಿತವಾಗಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಸಹ ಶಿಕ್ಷಕಿ ಎ.ಸಿ. ಸುನೀತ ವಂದಿಸಿದರು.