ಸುಂಟಿಕೊಪ್ಪ, ಆ. 10: ಇನ್ನರ್ ವಿಲ್ ಕ್ಲಬ್ ವತಿಯಿಂದ ದೇಶವನ್ನು ತಬ್ಬಲಿ ಮುಕ್ತ ದೇಶವನ್ನಾಗಿ ನಿರ್ಮಿಸುವದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಕುಶಾಲನಗರ ಇನ್ನರ್ ವಿಲ್ ಕ್ಲಬ್‍ನ ಅಧ್ಯಕ್ಷೆ ಕವಿತಾ ಸಾತಪ್ಪನ್ ಹೇಳಿದರು.

ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಾಸ್ ಜನ ಸೇವಾ ಟ್ರಸ್ಟ್ ಕೇಂದ್ರಕ್ಕೆ ಭೇಟಿ ನೀಡಿ ಇನ್ನರ್ ವೀಲ್ ಕ್ಲಬ್ ವತಿಯಿಂದ ‘ಮಿಷನ್ ಮಮತಾ’ ಎಂಬ ಕಾರ್ಯಕ್ರಮದಡಿಯಲ್ಲಿ ‘ವಿಕಾಸ್ ಜನ ಸೇವಾ ಟ್ರಸ್ಟ್’ ಕೇಂದ್ರವನ್ನು ಮುನ್ನಡೆಸುತ್ತಿರುವ ರಮೇಶ್ ಮತ್ತು ಕುಟುಂಬವನ್ನು ಸನ್ಮಾನಿಸಿ ಮಾತನಾಡಿದ ಅವರು, ದೇಶದಲ್ಲಿ ತಬ್ಬಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕುಟುಂಬದಲ್ಲಿ ಸಾಮರಸ್ಯದ ಕೊರತೆ, ಮಾನಸಿಕತೆ, ಅನಾರೋಗ್ಯ ಸೇರಿದಂತೆ ತಬ್ಬಲಿಗಳಾಗುತ್ತಿರುವ ಮಂದಿಗೆ ಆಧಾರ ಸ್ತಂಭವಾಗುವ ದಿಸೆಯಲ್ಲಿ ಇನ್ನರ್ ವಿಲ್ ಸಂಸ್ಥೆ ರಾಷ್ಟ್ರವ್ಯಾಪಿ ಮಿಷನ್ ಮಮತಾ ಕಾರ್ಯಕ್ರಮದಡಿಯಲ್ಲಿ ತಬ್ಬಲಿ ಮುಕ್ತ ದೇಶವನ್ನಾಗಿ ಮಾಡಲು ಪಣತೊಟ್ಟಿದೆ ಎಂದರು.

ಈ ಸಂದರ್ಭ ಇನ್ನರ್ ವಿಲ್ ಕ್ಲಬ್ ಪದಾಧಿಕಾರಿಗಳಾದ ಚಿತ್ರಾ ರಮೇಶ್, ನೇಹಾ, ಅಶ್ವಿನಿ ರೈ, ರೇಖಾ ಗಂಗಾಧರ್, ಸಂಧ್ಯಾ ಪ್ರಮೋದ್, ರೂಪಾ ಉಮಾಶಂಕರ್, ಶಾಲಿನಿ ನರೇಂದ್ರ ಮತ್ತಿತರರು ಹಾಜರಿದ್ದರು.