ಚೆಟ್ಟಳ್ಳಿ, ಆ. 10: ಗುಂಡಿಕೆರೆಯಲ್ಲಿ ಭಾರಿ ಮಳೆಯ ಕಾರಣ ಸಮೀಪ ಬಿಟೋಳಿ ಎಂಬಲ್ಲಿಯ ಆಮೀನ ಎಂಬುವವರ ಮನೆ ಕುಸಿದಿದೆ.ಕೊಟ್ಟೊಳಿ ಗ್ರಾಮದ ರಜಾಕ್,ನಿಸಾರ್,ಅಲಿ , ಹನೀಫ್, ಝಕೀರ್ ಸಅದಿ,ಝೈನುದ್ದೀನ್ ಎಂಬವರ ಮನೆಗಳಿಗೆ ಹಾನಿಯಾಗಿದೆ. ಮನೆಗಳ ಹಿಂದೆಯ ಬರೆ ಕಾಂಪೌಂಡ್ ಕುಸಿದಿದೆ. ಗುಂಡಿಕೆರೆ ಮಸೀದಿಯ ತಡೆಗೋಡೆ ಕುಸಿದಿದೆ. ಹಲವಾರು ಜನರ ತೋಟಗಳು ಹಾನಿಗೊಳಗಾಗಿವೆ. ತೋಟಗಳು ಕೊಚ್ಚಿಕೊಂಡುಬಂದು ರಸ್ತೆಯಲ್ಲಿ ನಿಂತಿದೆ. ಈ ಸಂದರ್ಭ ಎಸ್.ಎಸ್.ಎಫ್. ಜಿಲ್ಲಾ ಕಾರ್ಯದರ್ಶಿ ಉಬೈದ್ ಗುಂಡಿಕೆರೆ ಹಾಗೂ ಗುಂಡಿಕೆರೆ ಶಾಖಾ ಕಾರ್ಯಕರ್ತರು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
- ಇಸ್ಮಾಯಿಲ್